ಚಿಲಿಯಲ್ಲಿ ಲಾಸ್ಕರ್ ಜ್ವಾಲಾಮುಖಿ ಸ್ಫೋಟ: ಆವರಿಸಿದ ದಟ್ಟ ಹೊಗೆ, ಧೂಳು ಮತ್ತು ವಿಷಕಾರಿ ಅನಿಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಲಿಯ ಆಂಡಿಸ್ ಪರ್ವತಗಳಲ್ಲಿ ಲಾಸ್ಕರ್ ಜ್ವಾಲಾಮುಖಿ ಸ್ಫೋಟಗೊಂಡಿದೆ. ಭಾರೀ ಹೊಗೆ, ಧೂಳು ಮತ್ತು ವಿಷಕಾರಿ ಅನಿಲಗಳು ಹೊರಸೂಸಿದ್ದು, ಇದರಿಂದಾಗಿ ಆಕಾಶದಲ್ಲಿ 6 ಸಾವಿರ ಮೀಟರ್ ವರೆಗೆ ದಟ್ಟ ಹೊಗೆ ಎದ್ದಿದೆ. ಶನಿವಾರ (ಡಿಸೆಂಬರ್ 10, 2022) ಮಧ್ಯಾಹ್ನ 12.36 ಕ್ಕೆ ಸ್ಫೋಟ ಸಂಭವಿಸಿದೆ ಎಂದು ರಾಷ್ಟ್ರೀಯ ಭೂವಿಜ್ಞಾನ ಮತ್ತು ಗಣಿಗಾರಿಕೆ ಸೇವೆ ತಿಳಿಸಿದೆ.

ಜ್ವಾಲಾಮುಖಿ ಸ್ಫೋಟಗೊಂಡಾಗ, ಭೂಮಿ ಸ್ವಲ್ಪ ಕಂಪಿಸಿದ ಅನುಭವವಾಗಿದೆ. ಜ್ವಾಲಾಮುಖಿ ಸ್ಫೋಟಗೊಂಡ 30 ಕಿಲೋಮೀಟರ್ ದೂರದಲ್ಲಿರುವ ತಲ್ರ್ಬೆ ಪಟ್ಟಣದ ಜನರನ್ನು ಅಧಿಕಾರಿಗಳು ಎಚ್ಚರಿಸಿದ್ದಾರೆ. ಆಂಡಿಸ್ ಪರ್ವತ ಶ್ರೇಣಿಯಲ್ಲಿರುವ ಸಕ್ರಿಯ ಜ್ವಾಲಾಮುಖಿಗಳಲ್ಲಿ ಲಾಸ್ಕರ್ ಒಂದಾಗಿದೆ.

ಇದರ ಎತ್ತರ 5,592 ಮೀಟರ್. ಈ ಜ್ವಾಲಾಮುಖಿ ಕೊನೆಯದಾಗಿ 1993 ರಲ್ಲಿ ಸ್ಫೋಟಿಸಿತು. 2006 ಮತ್ತು 2015 ರಲ್ಲಿಯೂ ಅಲ್ಪ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!