ಹೊಸದಿಗಂತ ಡಿಜಿಟಲ್ ಡೆಸ್ಕ್:
17,835.9 ಕೋಟಿ ರೂ. ಮೊತ್ತದ ಆರು ಹೊಸ ಯೋಜನೆಗಳು ಹಾಗೂ ಹೆಚ್ಚುವರಿ ಬಂಡವಾಳ ಹೂಡಿಕೆಯ ಎಂಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆ ನಡೆದಿದ್ದು, ಇದರಲ್ಲಿ ಸಮ್ಮತಿ ಸೂಚಿಸಲಾಗಿದೆ.
ಆರು ಹೊಸ ಯೋಜನೆಗಳಿಗೆ 8,220.05 ಕೋಟಿ ರೂ. ಹಾಗೂ ಹೆಚ್ಚುವರಿ ಬಂಡವಾಳ ಹೂಡಿಕೆಯ ಎಂಟು ಯೋಜನೆಗಳಿಗೆ 9,615.85 ಕೋಟಿ ರೂ ಅನುಮೋದನೆ ಮಾಡಲಾಗಿದೆ.
ಈ ಅನುಮೋದನೆಯಿಂದಾಗಿ 27 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.