ಹೆದ್ದೆರೆಗಳ ಹೊಡೆತಕ್ಕೆ ತತ್ತರಿಸಿದ ಐತಿಹಾಸಿಕ ಬ್ರಿಡ್ಜ್: ವಲಿಯತುರಾ ಸಮುದ್ರ ಸೇತುವೆ ಇಬ್ಭಾಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಆಕರ್ಷಣೆಗಳಲ್ಲಿ ಒಂದಾಗಿರುವ ತಿರುವನಂತಪುರಂನ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ ಹೆದ್ದೆರೆಗಳ ಹೊಡೆತಕ್ಕೆ ನಲುಗಿ ಇಬ್ಬಾಗವಾಗಿದೆ.

ಈ ಹಿಂದೆ 2017ರಲ್ಲಿ ಅಪ್ಪಳಿಸಿದ್ದ ಓಖಿ ಚಂಡಮಾರುತ, 2021ರಲ್ಲಿ ಕಾಣಿಸಿಕೊಂಡಿದ್ದ ಟೌಕ್ಟೆ ಚಂಡಮಾರುತದ ಸಂದರ್ಭವೂ ಈ ಸೇತುವೆ ಹಾನಿಗೊಳಗಾಗಿತ್ತು. ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ.

1825 ರಲ್ಲಿ ಮೊದಲು ಉಕ್ಕಿನಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ 1987ರಲ್ಲಿ ಎಂ.ವಿ. ಪಂಡಿತ್ ಹೆಸರಿನ ಹಡಗು ಡಿಕ್ಕಿಯಾಗಿ ಹಾನಿಗೊಳಗಾಗಿತ್ತು. ಬಳಿಕ 1957ರಲ್ಲಿ ಪುನರ್ ನಿರ್ಮಾಣಗೊಂಡು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!