ಆಯೋಧ್ಯೆಯಲ್ಲಿ ಬೆಳಗಿತು 18 ಲಕ್ಷ ದೀಪಗಳು: ದೀಪೋತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 18 ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಮೋದಿ ನಾವು ಲಕ್ಷ ಲಕ್ಷ ದೀಪ ಬೆಳಗಿದ್ದೇವೆ, ಆದರೆ 14 ವರ್ಷಗಳ ವನವಾಸ ಮುಗಿಸಿ ಆಯೋಧ್ಯೆಗೆ ಆಗಮಿಸಿದ ಶ್ರೀರಾಮನಿಗೆ ಯಾವ ರೀತಿ ಸ್ವಾಗತ ಸಿಕ್ಕಿರಬಹುದು ಎಂದು ನಾನು ಯೋಚಿಸುತ್ತಿದ್ದೆನೆ ಎಂದರು.

ಇಂದು ಬಳಗಿರುವ ಪ್ರತಿಯೊಂದು ದೀಪವೂ ಶ್ರೀರಾಮ ಆದರ್ಶಗಳನ್ನು ಹೇಳುತ್ತಿದೆ. ನಮಗೆ ಈ ದೀಪಾವಳಿ, ದೀಪ ಕೇವಲ ಒಂದು ವಸ್ತುವಲ್ಲ. ವಿಶ್ವವನ್ನೇ ಬೆಳಗುವ ಶಕ್ತಿ ಎಂದು ಮೋದಿ ಹೇಳಿದ್ದಾರೆ.

ವಿಜಯವೂ ಯಾವಗಲೂ ಶ್ರೀರಾಮ ರೂಪಿ ಸದಾಚಾರನಿಗೆ ಒಲಿಯುತ್ತದೆ. ಇದು ರಾಣವನ ರೂಪಿಗಲ್ಲ. ದೀಪವೂ ಜ್ಯೋತಿ ಬ್ರಹ್ಮನ ಸ್ವರೂಪವಾಗಿದೆ. ಆ ಆಧ್ಯಾತ್ಮಿಕ ಹಬ್ಬ ಭಾರತವನ್ನು ಪ್ರಕಾಶಮಾನ ಮಾಡಲಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಗೋಸ್ವಾಮಿ ತುಳುಸಿದಾಸ ಹೇಳಿದ ಮಾತನ್ನು ಹೇಳುತ್ತೇನೆ. ಶ್ರೀರಾಮ ಇಡೀ ವಿಶ್ವಕ್ಕೆ ಬೆಳಕು ನೀಡುತ್ತಾನೆ. ಈ ಪ್ರಕಾಶ ದಯಾ ಹಾಗೂ ಕರುಣೆ ಎಂದು ಮೋದಿ ಹೇಳಿದ್ದಾರೆ.

ಆಯೋಧ್ಯೆ 5 ದಿನಗಳ ಕಾಲ 18 ಲಕ್ಷ ದೀಪಗಳಿಂದ ಕಂಗೊಳಿಸಲಿದೆ. ಇಡೀ ಆಯೋಧ್ಯೆಯಲ್ಲಿ ದೀಪಾವಳಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಎಲ್ಲೆಡೆ ದೀಪಗಳಿಂದ ಆಯೋಧ್ಯೆ ಕಂಗೊಳಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!