ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಟರ್ಕಿ-ಸಿರಿಯಾ ಹೆಣಗಳ ರಾಶಿಯಿಂದ ತುಂಬಿದೆ.
ಈಗಾಗಲೇ 7,800ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದ್ದು, ಇನ್ನೂ 1,18,000 ಮಂದಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ, ಇಲ್ಲಿ ಸಿಲುಕಿರುವ ಎಲ್ಲರೂ ಮೃತಪಟ್ಟಿರಬಹುದು ಎಂದು ದುರಂತವನ್ನು ನಿರ್ಝಯಿಸುತ್ತಿರುವ ಭೂಕಂಪ ತಜ್ಞರು ಮಾಹಿತಿ ನೀಡಿದ್ದಾರೆ.
ಈ ಭೂಕಂಪನದಿಂದ ಒಟ್ಟಾರೆ 23 ಮಿಲಿಯನ್ ಜನರು ಪ್ರಭಾವಿತರಾಗಿದ್ದು, ಟರ್ಕಿಯಲ್ಲಿ 5,894 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 1932 ಮಂದಿ ಮೃತಪಟ್ಟಿದ್ದಾರೆ. ಈ ಸಾವಿನ ಸಂಖ್ಯೆಯು 20,000ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.