ರಾಜ್ಯದಲ್ಲಿ 24 ಗಂಟೆಯಲ್ಲಿ 185 ಮಂದಿಗೆ ಡೆಂಗ್ಯೂ ಪಾಸಿಟಿವ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 185 ಮಂದಿಗೆ ಡೆಂಗ್ಯೂ ಫೀವರ್ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.

24 ಗಂಟೆಯಲ್ಲಿ 948 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 185 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂದು ದೃಢರಟ್ಟಿರುವುದಾಗಿ ತಿಳಿಸಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 425 ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, 91 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ಬಂದಿದೆ. ರಾಮನಗರದಲ್ಲಿ 23 ಮಂದಿಯಲ್ಲಿ 11, ಚಿಕ್ಕಬಳ್ಳಾಪುರ 28 ಜನರಲ್ಲಿ 2, ಚಿತ್ರದುರ್ಗ 95 ಮಂದಿಯಲ್ಲಿ 25 ಜನರಿಗೆ ಡೆಂಗ್ಯೂ ಪಾಸಿಟಿವ್ ಎಂದು ದೃಢಪಟ್ಟಿದೆ.

ಧಾರವಾಡದಲ್ಲಿ 30, ಯಾದಗಿರಿ ಐವರು, ಮಂಡ್ಯದಲ್ಲಿ 19, ಉಡುಪಿಯಲ್ಲಿ ಇಬ್ಬರು ಸೇರಿದಂತೆ 185 ಜನರಿಗೆ ಇಂದು ಒಂದೇ ದಿನ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಇನ್ನೂ ಈವರೆಗೆ ಬೆಂಗಳೂರು ನಗರದಲ್ಲಿ ಒಬ್ಬರು, ಶಿವಮೊಗ್ಗ ಒಬ್ಬರು, ಧಾರವಾಡ 01, ಗದಗ 01. ಮೈಸೂರು 01, ಹಾಸನ 02 ಸೇರಿದಂತೆ 7 ಜನರು ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!