ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ನ ಮಹತ್ವದ ಪಂದ್ಯದಲ್ಲಿ ಭಾರತವು ಪಾಕಿಸ್ಥಾನವನ್ನು 191 ರನ್ ಗಳಿಗೆ ನಿಯಂತ್ರಿಸಲು ಸಫಲವಾಗಿದೆ.
ಆರಂಭದಲ್ಲಿ ಉತ್ತಮ ನಿರ್ವಹಣೆ ನೀಡಿದ ಪಾಕಿಸ್ಥಾನವು ಬೃಹತ್ ಮೊತ್ತದತ್ತ ಸಾಗುವ ಸಂಕೇತ ತೋರಿತ್ತಾದರೂ ಬಳಿಕ ಭಾರತೀಯ ಬೌಲರ್ ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಇಮಾಮ್ ಉಲ್ ಹಕ್ (36), ಬಾಬರ್ ಅಜಮ್ (50), ರಿಜ್ವಾನ್ (49) ರನ್ ಗಳ ನೆರವಿನಿಂದ ಪಾಕಿಸ್ಥಾನ 29 ಓವರುಗಳಲ್ಲಿ ಮೂರು ವಿಕೆಟ್ ಕಳಕೊಂಡು155 ರನ್ ಗಳಿಸಿತ್ತು.
ಆದರೆ ಬಳಿಕ ಭಾರತೀಯ ಬೌಲರುಗಳು ಮಾರಕ ಹೊಡೆತ ನೀಡಿ ಪಾಕಿಸ್ಥಾನ ಕುಸಿಯುವಂತೆ ಮಾಡಿದರು.
ಅಂತಿಮವಾಗಿ ಪಾಕಿಸ್ತಾನ 191 ರನ್ ಗಳಿಸಿತು.