Sunday, February 5, 2023

Latest Posts

1993 ಮಾದರಿ ಸ್ಫೋಟದ ಬೆದರಿಕೆ: ಮುಂಬೈಯಲ್ಲಿ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

1993 ಮಾದರಿಯ ಸ್ಫೋಟ ನಡೆಸುವುದಾಗಿ ಮುಂಬೈ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ.

ಬಂಧನಕ್ಕೂ 24 ಗಂಟೆಗಳ ಮುನ್ನ ಆತ 1993 ರ ಮಾದರಿಯಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದನು.
ಶನಿವಾರದಂದು ಸಂಜೆ ಅನಾಮಧೇಯ ವ್ಯಕ್ತಿಯಿಂದ ಬಂದ ಕರೆಯಲ್ಲಿ ಮಹಿಮ್ ಭೆಂಡಿ ಬಜಾರ್ ಎಂಬಾತ , ನಾಗ್ಪಾದ, ಮದನ್ಪುರ ಹಾಗೂ ಇನ್ನಿತರ ಪ್ರದೇಶಗಳಲ್ಲಿ 2 ತಿಂಗಳ ಬಳಿಕ ಸರಣಿ ಸ್ಫೋಟ ಸಂಭವಿಸಲಿದೆ ಎಂದು ಹೇಳಿದ್ದನು.

ರಾಜ್ಯದಲ್ಲಿ ಕೋಮು ದಂಗೆ ಎಬ್ಬಿಸುವುದಕ್ಕಾಗಿ ಮುಂಬೈ ಗೆ ಬೇರೆ ಬೇರೆ ರಾಜ್ಯಗಳಿಂದ ಜನರನ್ನು ಕರೆತರಲಾಗಿದೆ ಎಂದುವ್ಯಕ್ತಿ ಹೇಳಿದ್ದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕರೆ ಮಾಡಿದ್ದ ವ್ಯಕ್ತಿಯನ್ನು ಪತ್ತೆ ಮಾಡುವುದಕ್ಕಾಗಿ ಎಟಿಎಸ್ 2 ವಿಶೇಷ ತಂಡಗಳನ್ನು ರಚಿಸಿತ್ತು, ಮಲದ್ ನ ಪ್ರದೇಶದಲ್ಲಿ ಆತನನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈತನ ಮೇಲೆ ಈಗಾಗಲೇ ಹಲವು ಅಪರಾಧದ ಪ್ರಕರಣಗಳಿದ್ದು ದರೋಡೆ, ಲೈಂಗಿಕ ಕಿರುಕುಳ, ಭೂ ಕಬಳಿಕೆ ಸೇರಿದಂತೆ ವಿವಿಧ 12 ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!