ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಗೆ ಅಭಿಮಾನಿಗಳು ಶುಭಾಶಯದ ಹೊಳೆ ಹರಿಸಿದ್ದಾರೆ.
ಹೌದು, ಜ.7ರಿಂದ 8ನೇ ತಾರೀಖು ರಾತ್ರಿವರೆಗೆ ಅಭಿಮಾನಿಗಳು ಟ್ವಿಟರ್ ಮೂಲಕ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಟರ್ ನಲ್ಲಿ ನಟ ಯಶ್ ಗೆ ಬರೋಬ್ಬರಿ 2.24 ಮಿಲಿಯನ್ ಮಂದಿ ಬರ್ಥ್ ಡೇ ವಿಶ್ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿಗಳ ಖುಷಿ ಮತ್ತಷ್ಟು ಹೆಚ್ಚಾಗಿದೆ.
ಸ್ಟಾರ್ ಹುಟ್ಟು ಹಬ್ಬಗಳೆಂದರೆ ಹೀಗೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮನೆಗಲಿಗೆ ಹೋಗಿ ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡ್ತಾರೆ. ಆದರೆ ಈ ಬಾರಿ ಕೊರೋನಾ ಇರುವ ಕಾರಣ ಎಲ್ಲಾ ಅಭಿಮಾನಿಗಳು ಟ್ವಿಟರ್ ಮೂಲಕ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.