September 23, 2026
Wednesday, September 23, 2026
spot_img

ವಿಕಸಿತ ಭಾರತ@2047 ಗುರಿ: ಇಂದಿನಿಂದ 2 ದಿನ ಪ್ರಧಾನಿ ಮೋದಿ ನೇತೃತ್ವದಲ್ಲಿ ‘ಚಿಂತನ ಶಿಬಿರ’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದಿನಿಂದ ದೆಹಲಿಯಲ್ಲಿ ಚಿಂತನ ಶಿಬಿರ ಆರಂಭವಾಗಲಿದೆ. 2047 ರ ವೇಳೆ ಭಾರತವನ್ನು ಹೇಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ಸಂಕಲ್ಪದಲ್ಲಿ ಚಿಂತನ ಶಿಬಿರ ಆರಂಭವಾಗಲಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಹಾಗೂ ನಾಳೆ ಶಿಬಿರ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವ ಸಂಪುಟದ ಸದಸ್ಯರು, ವಿವಿಧ ಇಲಾಖೆಗಳು ಕಾರ್ಯದರ್ಶಿಗಳು, ನೀತಿ ಆಯೋಗದ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಸೆಪ್ಟೆಂಬರ್ 23 ಮತ್ತು 24 ರಂದು ನಡೆಯುತ್ತಿರುವ ಈ ಸಭೆಯು ಕೇವಲ ಒಂದು ಬಾರಿಯ ಸಭೆಯಲ್ಲ. ಮುಂದಿನ ದಿನಗಳಲ್ಲಿ ಇಲಾಖಾವಾರು ಗುರಿಗಳನ್ನು ಸಾಧಿಸಲು ನಿರಂತರವಾಗಿ ಇಂತಹ ಮಂಥನಗಳು ಮುಂದುವರೆಯಲಿವೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಈಗಾಗಲೇ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ರಚನಾತ್ಮಕ ಸುಧಾರಣೆಗಳನ್ನು ಸಮಗ್ರವಾಗಿ ಪರಾಮರ್ಶಿಸಲಾಗುತ್ತಿದೆ. ಹತ್ತು ವಲಯವಾರು ಕಾರ್ಯದರ್ಶಿಗಳ ಸಮಿತಿಗಳು ಸಿದ್ಧಪಡಿಸಿರುವ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕ್ರಿಯಾಯೋಜನೆಗಳ ಮೇಲೆ ಚರ್ಚೆ ನಡೆಯಲಿದ್ದು, ಆಡಳಿತದಲ್ಲಿ ಸರಳತೆ ಮತ್ತು ನಿಯಮಗಳ ಪಾಲನೆಯ ಹೊರೆ ತಗ್ಗಿಸುವ ಅಂಶಗಳಿಗೆ ಒತ್ತು ನೀಡಲಾಗಿದೆ.

ಯಾವೆಲ್ಲಾ ವಿಷಯಗಳಿಗೆ ಆದ್ಯತೆ?

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ್ದ ‘ಸಪ್ತಧಾರ’ ಆಧಾರಸ್ತಂಭಗಳ ಮೇಲೆ ಈ ಶಿಬಿರದಲ್ಲಿ ವಿಶೇಷ ಗಮನ ಹರಿಸಲಾಗುತ್ತಿದೆ. ಉತ್ಪಾದನಾ ಶಕ್ತಿ, ಕೃಷಿ, ತಂತ್ರಜ್ಞಾನ, ಟ್ರಾನ್ಸ್‌ಪೋರ್ಟ್‌, ರಕ್ಷಣಾ ಶಕ್ತಿ, ಪರಿಸರ ರಕ್ಷಣೆ, ಯೋಗ, ಚಿತ್ರಕಲೆ, ಸಿನಿಮಾ, ಆಯುರ್ವೇದ, ಮಿಷನ್‌ ಕರ್ಮಯೋಗಿ, ಜಾಗತಿಕ ಪೂರೈಕೆ ಸರಪಳಿ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !