ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22 ಭಾರತಕ್ಕಷ್ಟೇ ಅಲ್ಲ, ಹೊರದೇಶಗಳಿಗೂ ಅತ್ಯಂತ ಮುಖ್ಯವಾದ ದಿನವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ವೀಕ್ಷಿಸಲು ಮಾರಿಷಸ್ ಅನುಕೂಲ ಮಾಡಿಕೊಟ್ಟಿದೆ.
ಸಂಪೂರ್ಣ ದಿನ ರಜೆ ನೀಡಲು ಆಗದಿದ್ದರೂ, ಎರಡು ಗಂಟೆಗಳ ವಿರಾಮವನ್ನು ಮಾರಿಷಸ್‌ನ ಎಲ್ಲ ಹಿಂದೂಗಳಿಗೆ ನೀಡಲಾಗಿದೆ.
ಮಾರಿಷಸ್ ಸನಾತನ ಧರ್ಮ ಟೆಂಪಲ್ ಫೆಡರೇಷನ್ ಹಾಗೂ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್‌ಗೆ ಪತ್ರ ಬರೆಯಲಾಗಿದ್ದು, ಕಾರ್ಯಕ್ರಮ ವೀಕ್ಷಿಸಲು ಮಾರಿಷಸ್‌ನ ಹಿಂದೂಗಳಿಗೆ ಅವಕಾಶ ನೀಡಿ ಎಂದು ಮನವಿ ಮಾಡಲಾಗಿತ್ತು.
ಅಂತೆಯೇ ಮಾರಿಷಸ್ ಎರಡು ಗಂಟೆಗಳ ವಿರಾಮ ಘೋಷಿಸಿದ ಹಿಂದೂಗಳ ಮನಸ್ಸಿಗೆ ಸಂತಸವುಂಟುಮಾಡಿದೆ. ಎರಡು ಗಂಟೆಗಳ ವಿಶೇಷ ರಜೆಗೆ ಮಾರಿಷಸ್ ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ಹಿಂದೂಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.