ಪೊಲೀಸ್‌ ಬಸ್‌ ಡಿಕ್ಕಿಯಾಗಿ ಭೀಕರ ಅವಘಡ: ಮೂವರು ಬೈಕ್‌ ಸವಾರರು ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೊಲೀಸ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ಡಿಕ್ಕಿಯಾದ ಪರಿಣಾಮ ಮೂವರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಿಹಾರದ ಚಪ್ರಾ- ಸಿವಾನ್ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಬಿಹಾರದ ಚಪ್ರಾ-ಸಿವಾನ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ ಪೊಲೀಸ್ ಬಸ್‌ ಗೆ ಡಿಕ್ಕಿಯಾಗಿದೆ.
ಈ ವೇಳೆ ಮೂವರು ಬೈಕ್‌ ಸವಾರರು ಬಸ್ಸಿನಡಿ ಸಿಲುಕಿಕೊಂಡಿದ್ದು, ಬಸ್‌ ಅವರನ್ನು 90 ಮೀಟರ್ ಎಳೆದೊಯ್ದಿದೆ. ಈ ವೇಳೆ ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟಗೊಂಡು ಮೂವರು ಬೈಕ್ ಸವಾರರು ಸಜೀವ ದಹನವಾಗಿದ್ದಾರೆ.  ಮೂವರೂ ಯುವ ಬೈಕ್ ಸವಾರರು ಪೊಖಾರ್ ಭಿಂಡಾ ಗ್ರಾಮದ ನಿವಾಸಿಗಳಾಗಿದ್ದಾರೆ. ಅವರನ್ನು ಬಾಬುಲಾಲ್ ಮಾಂಝಿ, ಕುಂದನ್ ಮಾಂಝಿ ಮತ್ತು ದೇವನಾಥ್ ಮಾಂಝಿ ಎಂದು ಗುರುತಿಸಲಾಗಿದೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಬಸ್ಸಿನಲ್ಲಿದ್ದ ಪೊಲೀಸ್‌ ಸಿಬ್ಬಂದಿ ಬಸ್ಸಿಗೆ ಬೆಂಕಿ ಹೊತ್ತುತ್ತಲೇ ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!