ಜಿಮ್‌ನಲ್ಲಿ ಮಹಿಳಾಮಣಿಗಳ ಮಾರಾಮಾರಿ: ಜುಟ್ಟು ಹಿಡಿದು ಹೊಡೆದಾಡಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಪರಸ್ಪರ ತಲೆಗೂದಲು ಹಿಡಿದು ಹೊಡೆದಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯೊಬ್ಬರು ಸ್ಮಿತ್ ಮೆಷಿನ್‌ನಲ್ಲಿ ವ್ಯಾಯಾಮ ಮಾಡಲು ಕಾಯುತ್ತಿದ್ದಾರೆ. ಅಲ್ಲಿವರೆಗೂ ವ್ಯಾಯಾಮ ಮಾಡುತ್ತಿದ್ದ ಮಹಿಳೆ ಹೋದ ಬಳಿಕ ಏರಡನೇ ಮಹಿಳೆ ಮೆಷಿನ್‌ ಮೇಲೆ ತೆರಳಲು ಹೋಗುವಷ್ಟರಲ್ಲಿ ಮತ್ತೊಬ್ಬ ಮಹಿಳೆ ಬಂದು ಆಕ್ರಮಿಸಿದ್ದಾರೆ. ಅಷ್ಟೇ ಮುಈತು ಕಥೆ ನಾನು ಮೊದಲು ಬಂದಿದ್ದು ಅಂತ, ನಾನು ಬಂದೆ ಅಂತ ಇಬ್ಬರ ನಡುವೆ ಮಾರಾಮಾರಿ ನಡೆದೇ ಬಿಟ್ಟಿದೆ.

ಇದನ್ನು ಕಂಡ ಕೋಚ್ ಹಾಗೂ ಇತರೆ ಮಹಿಳೆಯರು ಅವರನ್ನು ಬಿಡಿಸಲು ಯತ್ನಿಸಿದರು. ಈ ವೀಡಿಯೋ ನೋಡಿದ ನೆಟ್ಟಿಗರು ಇಂಟರೆಸ್ಟಿಂಗ್ ಕಮೆಂಟ್ಸ್ ಮಾಡುತ್ತಿದ್ದಾರೆ. ಮೆಷಿನ್‌ನಿಂದ ವ್ಯಾಯಾಮ ಮಾಡುವ ಬದಲು ಹೀಗೆ ಹೊಡೆದಾಡುತ್ತಾ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು ಎಂದು ಕಾಲೆಳೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!