Tuesday, May 30, 2023

Latest Posts

ರೈತ ವರನ ಮದುವೆಯಾದ್ರೆ ವಧುವಿಗೆ 2 ಲಕ್ಷ: ಜೆಡಿಎಸ್‌ ನಿಂದ ಪ್ರಣಾಳಿಕೆ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಜೆಡಿಎಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ, ರೈತರಿಗೆ ಹಾಗೂ ಆಟೋ ಚಾಲಕರು ಭರಪೂರ ಕೊಡುಗೆ ನೀಡುವ ಭರವಸೆ ನಿಡಿದ್ದಾರೆ.

ಜೆಡಿಎಸ್‌ ಸರ್ಕಾರ ಅಧಿಕಾರಕಕ್ಕೆ ಬಂದರೆ ಇದರಲ್ಲಿ ವಿಶೇಷವಾಗಿ ರೈತ ಯುವಕರನ್ನು ಮದುವೆಯಾದರೆ ಯುವತಿಯರಿಗೆ 2 ಲಕ್ಷ ರೂ, ಸಹಾಯಧಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.

ಜೆಡಿಎಸ್ ಪ್ರಣಾಳಿಕೆಯ ಪ್ರಮುಖ ಘೋಷಣೆಗಳು:

  • ರೈತ ಸಂಗಾತಿ ಯೋಜನೆ: ರೈತ ವರನ ವಿವಾಹವಾಗುವ ವಧುವಿಗೆ 2 ಲಕ್ಷ ರೂ. ಸಹಾಯಧನ
  • ಸೈಕಲ್‌ ವಿತರಣೆ: ರಾಜ್ಯದ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ
  • ಅಕ್ಷರದಾತೆ: ಅಂಗನವಾಡಿ ಕಾರ್ಯಕರ್ತೆಯರಿಗೆ 5,000 ರೂ. ವೇತನ ಹೆಚ್ಚಳ
  • ಸಾರಥಿಗೆ ಸೈ: ಆಟೋ ಚಾಲಕರಿಗೆ ಮಾಸಿಕ 2 ಸಾವಿರ ರೂ. ಹಣಕಾಸು ನೆರವು
  • ವಿದ್ಯಾನಿಧಿ ಯೋಜನೆ: ಪದವಿ ಅಭ್ಯಾಸ ಮಾಡುವ ಎಲ್ಲ ಬಿಪಿಎಲ್‌ ಕುಟುಂಬದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಮೊಪೆಡ್‌
  • ಕ್ಷೇಮ ನಿಧಿ ಯೋಜನೆ: ಅತಿ ವಿರಳ ಕಾಯಿಲೆಯಿಂದ ಬಳಲುವವರಿಗೆ 25 ಲಕ್ಷ ರೂ. ನೆರವು
  • ಮಾತೃಶ್ರೀ ಯೋಜನೆ: ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6 ಸಾವಿರ ರೂ ಭತ್ಯೆ.
  • ವಿಧವಾ ವೇತನ ಹೆಚ್ಚಳ: ಈಗಿರುವ ವಿಧವಾ ವೇತನ 900 ರೂ ನಿಂದ 2,500 ಕ್ಕೆ ಏರಿಕೆ
  • ಮುಸ್ಲಿಂ ಮೀಸಲಾತಿ ಪುನಃಸ್ಥಾಪನೆ: ಮುಸ್ಲಿಮರಿಗೆ ಈ ಹಿಂದೆ ಇರುವಂತೆ ಒಬಿಸಿ 2ಬಿ ಶೇ.4 ಮೀಸಲಾತಿ ಮರುಜಾರಿ
  • ಸಿಲಿಂಡರ್‌ ಯೋಜನೆ: ಒಂದು ವರ್ಷಕ್ಕೆ 5 ಸಿಲಿಂಡರ್‌ ಉಚಿತ ವಿತರಣೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!