ಶಾಲೆಯೊಂದರಲ್ಲಿ ಗುಂಡಿನ ಮೊರೆತ:ಉದ್ದೇಶಿತ ದಾಳಿಯಿಂದಾಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೆಸ್ ಮೊಯಿನ್ಸ್ ಅಯೋವಾ ಚಾರ್ಟರ್ ಸ್ಕೂಲ್‌ನಲ್ಲಿ ಉದ್ದೇಶಿತ ಗುಂಡಿನ ದಾಳಿ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವುದಾಗಿ ಯುಎಸ್ ಮೂಲದ ಸುದ್ದಿ ಪ್ರಕಟಣೆ ದಿ ಹಿಲ್ ತಿಳಿಸಿದೆ. ದಿ ಹಿಲ್‌ನ ಪ್ರಕಾರ, ವಿದ್ಯಾರ್ಥಿಗಳನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು.

ಗುಂಡಿನ ದಾಳಿಯಲ್ಲಿ ಗಾಯಗೊಂಡ ಮೂರನೇ ವ್ಯಕ್ತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯಕ್ಕೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಗುಂಡಿನ ದಾಳಿಗೆ ಬಲಿಯಾದವರ ಹೆಸರನ್ನು ಬಹಿರಂಗಪಡಿಸಿಲ್ಲ. ಗುಂಡಿನ ದಾಳಿಯ ನಂತರ ನೇರವಾಗಿ ಮೂವರನ್ನು ಘಟನಾ ಸ್ಥಳದಿಂದ ಎರಡು ಮೈಲಿ ದೂರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ದಿ ಹಿಲ್ ವರದಿ ಮಾಡಿದೆ. ಇಬ್ಬರು ಶಂಕಿತರು ಕಾರಿನಲ್ಲಿ ಉಳಿದುಕೊಂಡಿದ್ದು, ಅವರನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!