ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮುಂಬೈ ಇಂಡಿಯನ್ಸ್ (Mumbai Indians)ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವಿನ ಪಂದ್ಯದಲ್ಲಿ ಯುವ ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ (Arshdeep Singh) ಎಸೆದ ಸತತ 2 ಯಾರ್ಕರ್‌ಗಳ ಮೂಲಕ ತಿಲಕ್ ವರ್ಮಾ ಮತ್ತು ನೆಹಾಲ್ ವಧೇರ ಅವರನ್ನ ಕ್ಲೀನ್ ಬೌಲ್ಡ್ ಮಾಡಿ ಮುಂಬೈಗೆ ಮರ್ಮಾಘಾತ ನೀಡಿದರು. ಆದ್ರೆ ಇದರ ನಡುವೆ ಇತ್ತ ಅರ್ಷ್‌ದೀಪ್ ಎಸೆದ ಬೌಲಿಂಗ್ ವೇಗಕ್ಕೆ ಸತತವಾಗಿ 2 ಬಾರಿ ಸ್ಟಂಪ್‌ಗಳು ಮುರಿದು ಹೋಯಿತು. ಇದರಿಂದ ಬಿಸಿಸಿಐಗೆ ಭಾರೀ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ARSHDEEP SINGH – BREAKING STUMPS FOR FUN 🔥pic.twitter.com/NNVlKWppaC
— Johns. (@CricCrazyJohns) April 22, 2023
LED ಸ್ಟಂಪ್ಸ್‌ನ ಬೆಲೆ ಎಷ್ಟು ಗೊತ್ತಾ?
ಆಸ್ಟ್ರೇಲಿಯಾ ಮೂಲದ ಕ್ರೀಡಾ ಸರಕು ಉತ್ಪಾದನಾ ಸಂಸ್ಥೆ ತಯಾರಿಸುವ ಈ ಎಲ್‌ಇಡಿ ಸ್ಟಂಪ್ಸ್ ಮತ್ತು ಝಿಂಗ್ ಬೇಲ್ಸ್ ಸೆಟ್‌ನ ಬೆಲೆ 40 ರಿಂದ 50 ಸಾವಿರ ಡಾಲರ್. ಭಾರತೀಯ ರೂಪಾಯಿ ಮೌಲ್ಯಕ್ಕೆ ಇದನ್ನು ಪರಿವರ್ತಿಸಿದರೆ, 32 ರಿಂದ 41 ಲಕ್ಷ ರೂ. ಬೆಲೆ ಬಾಳುತ್ತದೆ. ಅರ್ಷ್‌ದೀಪ್ ಕ್ಯಾಮೆರಾ ಇರುವ ಮಧ್ಯದ ಸ್ಟಂಪ್ ಮುರಿದಿದ್ದು, ಈ ಸ್ಟಂಪ್ ಒಂದರ ಬೆಲೆಯೇ 24 ಲಕ್ಷ ರೂ. ಆಗಿದೆ ಎಂದು ಅಂದಾಜಿಸಲಾಗಿದೆ. 2 ಸ್ಟಂಪ್ಸ್‌ನಿಂದ ಒಟ್ಟಾರೆ 48 ಲಕ್ಷ ರೂ.ಗಳ ನಷ್ಟ ಬಿಸಿಸಿಗೆ ಎದುರಾಗಿದೆ.