ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಜೀರಿಯಾದಲ್ಲಿ ಟ್ಯಾಂಕರ್ ಸ್ಫೋಟಗೊಂಡಿದ್ದು, ೨೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಂಡೋ ರಾಜ್ಯದ ಲಾಗೋಸ್-ಬೆನಿನ್ ಹೆದ್ದಾರಿ ಬಳಿ ಘಟನೆ ನಡೆದಿದ್ದು, ಮೂವರು ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ.
ರಸ್ತೆಯಲ್ಲಿ ತೈಲ ಟ್ಯಾಂಕರ್ ಸ್ಫೋಟವಾಗಿದ್ದು, ಬೆಂಕಿ ಮನೆಗಳಿಗೆ ಹರಡಿದೆ. ಜೊತೆಗೆ ಭಾರೀ ಕಪ್ಪು ಹೊಗೆ ರಸ್ತೆಯನ್ನು ಆವರಿಸಿದ್ದು, ಇಡೀ ಪ್ರದೇಶವೇ ಬೆಂಕಿಗಾಹುತಿಯಾದಂತೆ ಕಾಣಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.