ಆದಾಯತೆರಿಗೆ ವಸೂಲಾತಿಯಲ್ಲಿ 20 ಶೇ. ಏರಿಕೆ: 19.68 ಲಕ್ಷ ಕೋಟಿ ರೂ. ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ 20 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ವರದಿ ಮಾಡಿದೆ. ಒಟ್ಟಾರೆಯಾಗಿ 19.68 ಲಕ್ಷ ಕೋಟಿ ರೂ. ಆದಾಯ ತೆರಿಗೆ ಸಂಗ್ರಹವಾಗಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ನಿರಂತರ ಬೆಳವಣಿಗೆ, ಉತ್ತಮ ತೆರಿಗೆ ಆಡಳಿತಗಳನ್ನು ಪ್ರತಿಬಿಂಬಿಸುತ್ತದೆ.

2022-23ರ ಹಣಕಾಸು ವರ್ಷದಲ್ಲಿ ಮರುಪಾವತಿಯ ನಂತರ ನೇರ ತೆರಿಗೆ ಸಂಗ್ರಹಣೆಗಳ ನಿವ್ವಳ ಸಂಗ್ರಹಣೆ 16.61 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ14.12 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅಂದರೆ ವರ್ಷದಿಂದ ವರ್ಷಕ್ಕೆ 17.63 ಶೇಕಡಾ ಬೆಳವಣಿಗೆಯಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

2022-23ರಲ್ಲಿ ಒಟ್ಟಾರೆಯಾಗಿ 3,07,352 ಕೋಟಿ ರೂ. ಮರುಪಾವತಿಗಳನ್ನು ನೀಡಲಾಗಿದೆ. 2021-22 ರಲ್ಲಿ 2,23,658 ಕೋಟಿ ರೂ. ಮರುಪಾವತಿ ನೀಡಲಾಗಿತ್ತು. ಮರುಪಾವತಿ ವಿತರಣೆಯಲ್ಲಿ ವರ್ಷದಿಂದ ವರ್ಷಕ್ಕೆ 37.42 ಶೇಕಡಾ ಹೆಚ್ಚಳ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!