ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಭಾರೀ ಮಳೆಯಿಂದಾಗಿ ಮೀನುಗಾರಿಕೆ ಇಲಾಖೆಯ ಕೊಳಗಳು ಜಲಾವೃತವಾಗಿ ಸುಮಾರು 20 ಕ್ವಿಂಟಾಲ್‌ನಷ್ಟು ಮೀನು ಕೊಚ್ಚಿ ಹೋಗಿದೆ.
ಮೀನುಗಳು ರಸ್ತೆಗೆ ಬಂದಿದ್ದು, ಜನರು ಮೀನುಗಳನ್ನು ಆರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಏಕಾಏಕಿ ರಾಷ್ಟ್ರೀಯ ಹೆದ್ದಾರಿಯ ನೀರಿನಲ್ಲಿ ಮೀನುಗಳು ಕಾಣಿಸಿದ್ದು, ಜನರು ಗಾಡಿ ಪಕ್ಕಕ್ಕೆ ನಿಲ್ಲಿಸಿ ಮೀನು ಹಿಡಿಯಲು ನಿಂತಿದ್ದಾರೆ. ಇದರಿಂದಾಗಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಒಟ್ಟಾರೆ ಒಂಬತ್ತು ಲಕ್ಷ ರೂಪಾಯಿ ಮೌಲ್ಯದ ಮೀನುಗಳು ಕೊಚ್ಚಿಹೋಗಿವೆ ಎಂದು ಮೀನುಗಾರಿಕಾ ಇಲಾಖೆ ಮಾಹಿತಿ ನೀಡಿದೆ.