Wednesday, September 27, 2023

Latest Posts

ಕಾಮಿಕ್ ಕಾನ್ ಸಮಾರಂಭಕ್ಕೆ‌ ದಿಪಿಕಾ ಗೈರು: ಮಾಧ್ಯಮಗಳಿಗೆ ಏನಂದ್ರು ಪ್ರಭಾಸ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ʻಕಲ್ಕಿ 2898 ಎಡಿʼ ಸಿನಿಮಾದಲ್ಲಿ ದೀಪಿಕಾ ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಈ ಚಿತ್ರದ ಶೀರ್ಷಿಕೆ ಘೋಷಿಸಲು ಹಾಲಿವುಡ್ ಕಾಮಿಕ್ ಕಾನ್ ಸಮಾರಂಭದಲ್ಲಿ ಪ್ರಭಾಸ್, ಕಮಲ್ ಹಾಸನ್ ಮತ್ತು ಚಿತ್ರತಂಡ ಭಾಗಿಯಾಗಿತ್ತು. ಆದರೆ ಈ ಸಮಾರಂಭಕ್ಕೆ ದೀಪಿಕಾ ಹಾಜರಾಗಿರಲಿಲ್ಲ, ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳ ಬಳಿ ಪ್ರಭಾಸ್‌ ದೀಪಿಕಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ʻದೀಪಿಕಾ ದೊಡ್ಡ ಸೂಪರ್ ಸ್ಟಾರ್ ಜೊತೆಗೆ ತುಂಬಾ ಸುಂದರವಾದ ಹುಡುಗಿ, ಈಗಾಗಲೇ ತನ್ನ ಚಲನಚಿತ್ರಗಳಿಂದ ವಿಶ್ವದಾದ್ಯಂತ ಗುರುತಿಸಲ್ಪಟ್ಟಿದ್ದಾಳೆ. ಅಂತರರಾಷ್ಟ್ರೀಯ ಬ್ರಾಂಡ್‌ಗಳಿಗೆ ಜಾಹೀರಾತುಗಳನ್ನು ಮಾಡಿರುವುದರ ಜೊತೆಗೆ ರಾಯಭಾರಿಯೂ ಆಗಿದ್ದಾರೆ. ದೀಪಿಕಾ ಸೆಟ್‌ಗೆ ಬರುತ್ತಿದ್ದಂತೆ ಎಲ್ಲರಲ್ಲೂ ಉತ್ಸಾಹ ತುಂಬಿರುತ್ತದೆ. ಅವರೊಂದಿಗೆ ಕೆಲಸ ಮಾಡುವ ಇಚ್ಚೇ ಇತ್ತು. ಆ ಕನಸು ಈದೀಗ ನನಸಾಗುತ್ತಿದೆ. ಆಕೆಯನ್ನು ಇಬ್ಬ ನಟಿಯಾಗಿ ಬಹಳ ಇಷ್ಟಪಡುತ್ತೇನೆʼ ಎಂದರು.

ಪ್ರಭಾಸ್ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೀಪಿಕಾ ಅಭಿಮಾನಿಗಳು ಪ್ರಭಾಸ್ ಅವರ ಕಾಮೆಂಟ್‌ಗಳನ್ನು ಹೆಚ್ಚು ವೈರಲ್ ಮಾಡಿದ್ದು, ಮೆಚ್ಚುಗೆ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!