ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ: ಎಂದೆಂದಿಗೂ ಚಿರಋಣಿ ಎಂದ ಅಲ್ಲು ಅರ್ಜುನ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿರುವ ನಟ ಅಲ್ಲು ಅರ್ಜುನ್​ (Allu Arjun) ಅವರು ಇಂದಿಗೆ (ಮಾರ್ಚ್​ 28) ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿದೆ.

ಈ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ಅರ್ಪಿಸಿ ಅವರು, 2 ದಶಕಗಳ ಕಾಲ ಬಣ್ಣದ ಲೋಕದಲ್ಲಿ ಸಾಧನೆ ಮಾಡಲು ಅವಕಾಶ ಕೊಟ್ಟ ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರಿಗೆ ಅಭಿನಂದನೆ ತಿಳಿಸಿದ್ದಾರೆ .

‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಅಲ್ಲು ಅರ್ಜುನ್​ ಅವರು ಬ್ಯುಸಿ ಆಗಿದ್ದಾರೆ. ಟಾಲಿವುಡ್​ನಲ್ಲಿ 20 ವರ್ಷ ಪೂರೈಸಿದ್ದಕ್ಕಾಗಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ‘ಚಿತ್ರರಂಗದಲ್ಲಿ ನಾನು ಇಂದು 20 ವರ್ಷಗಳನ್ನು ಪೂರೈಸಿದ್ದೇನೆ. ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಚಿತ್ರರಂಗದ ಎಲ್ಲ ಆಪ್ತರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತೋರಿದ ಪ್ರೀತಿಯಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಅವರಿಗೆ ಎಂದೆಂದಿಗೂ ಚಿರಋಣಿ’ ಎಂದು ಬರೆದುಕೊಂಡಿದ್ದಾರೆ.


ಸೆಲೆಬ್ರಿಟಿಗಳಾದ ಸಮಂತಾ ರುತ್​ ಪ್ರಭು, ರಾಕುಲ್​ ಪ್ರೀತ್​ ಸಿಂಗ್​, ಅರ್ಮಾನ್​ ಮಲಿಕ್​, ಲಕ್ಷ್ಮಿ ಮಂಚು, ಶ್ರೇಯಾ ಘೋಷಾಲ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಲ್ಲು ಅರ್ಜುನ್​ ಅವರ ಪೋಸ್ಟ್​ಗೆ ಕಮೆಂಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಲು ಅರ್ಜುನ್​ ಅವರು 2003ರ ಮಾರ್ಚ್​ 28ರಂದು ಹೀರೋ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಅವರು ನಟಿಸಿದ ಮೊದಲ ಸಿನಿಮಾ ‘ಗಂಗೋತ್ರಿ’ ಅಂದು ತೆರೆಕಂಡಿತು. ಆಗ ಅಲ್ಲು ಅರ್ಜುನ್​ ಅವರಿಗೆ 21ರ ಪ್ರಾಯ. ಮೊದಲ ಚಿತ್ರದಲ್ಲೇ ಅವರು ದೊಡ್ಡ ಗೆಲುವು ಪಡೆದುಕೊಂಡರು. ಬಳಿಕ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತ ಅಭಿಮಾನಿಗಳಿಗೆ ಹತ್ತಿರವಾದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!