ಸಂಡೂರಿನಲ್ಲಿ ಹಕ್ಕಿ ಜ್ವರದಿಂದ 2000 ಕೋಳಿಗಳು ಸಾವು: ಪೌಲ್ಟ್ರಿ ಫಾರಂ ಮಾಲೀಕರಿಗೆ ನಡುಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಣಿ ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದರಿಂದ ಪೌಲ್ಟ್ರಿ ಫಾರಂ ಮಾಲೀಕರಲ್ಲಿ ನಡುಕು ಶುರುವಾಗಿದ್ದು, ಸಂಡೂರು ತಾಲೂಕಿನ ಸರಕಾರಿ ಪೌಲ್ಟ್ರಿ ಫಾರಂನಲ್ಲಿ 2400 ಕೋಳಿಗಳು ಮೃತಪಟ್ಟಿವೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಕೋಳಿಜ್ವರ ಕಾಲಿಟ್ಟಿದ್ದು, ನಿನ್ನೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ಕೋಳಿಗಳು ಮೃತಪಟ್ಟಿವೆ. ಕೆಲದಿನಗಳ ಕಾಲ ಚಿಕನ್‌ ಸೇವನೆ ನಿಲ್ಲಿಸಿ ಎಂದು ಅಲ್ಲಿನ ಜಿಲ್ಲಾಧಿಕಾರಿ ಮನವಿ ಮಾಡಿದ್ದರು.

ಸುಮಾರು 20 ರಿಂದ 30 ಪಕ್ಷಿಗಳು ಕೇಂದ್ರದಲ್ಲಿ ಸತ್ತಿವೆ ಅಥವಾ ಸಾಯುವ ಹಂತದಲ್ಲಿವೆ. ಪ್ರತಿದಿನ ಸುಮಾರು 100 ರಿಂದ 200 ಪಕ್ಷಿಗಳು ಸಾಯುತ್ತಿದ್ದವು. ನಾವು ಸತ್ತ ಕೋಳಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಮತ್ತು ಅಲ್ಲಿ ನಡೆಸಿದ ಪರೀಕ್ಷೆಗಳಿಂದ, ಅವು ಹಕ್ಕಿ ಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ವಾರದಲ್ಲಿ 2,100 ಪಕ್ಷಿಗಳು ಮೃತಪಟ್ಟಿವೆ. ಈ ಪೈಕಿ 1,100 ಮಂದಿ ಹಕ್ಕಿ ಜ್ವರ ಎಂದು ದೃಢಪಡಿಸಿದ ನಂತರ ಸಾವನ್ನಪ್ಪಿವೆ. ಸೋಂಕನ್ನು ತಡೆಗಟ್ಟಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಹಕ್ಕಿಜ್ವರ ಕಾಣಿಸಿಕೊಂಡ ಕುರೆಕುಪ್ಪ ಗ್ರಾಮದ ಒಂದು ಕಿಮೀ ವ್ಯಾಪ್ತಿಯನ್ನು ಪಶು ಇಲಾಖೆ ಈಗಾಗಲೇ ಅಪಾಯಕಾರಿ ವಲಯ ಎಂದು ಗುರುತಿಸಿದೆ. ತೋರಣಗಲ್ಲು, ಕುರೆಕುಪ್ಪ, ವಡ್ಡು, ತಾಳೂರು, ಬಸ್ಸಾಪುರ, ದರೋಜಿ, ದೇವಲಾಪುರ ಸೇರಿ 10 ಕಿಮೀ ವ್ಯಾಪ್ತಿ ಪ್ರದೇಶವನ್ನು ಕಣ್ಣಾವಲು ಪ್ರದೇಶ ಎಂದು ಗುರುತಿಸುವ ಮೂಲಕ ಹಕ್ಕಿ ಜ್ವರ ಉಲ್ಬಣಗೊಳ್ಳದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

ಹಕ್ಕಿ ಜ್ವರ ವೈರಾಣುಗಳಿಂದ ಹರಡುತ್ತದೆ. ಸೋಂಕು ತಗುಲಿದ ಹಕ್ಕಿಗಳು ವಿಸರ್ಜಿಸುವ ಮಲ-ಮೂತ್ರದಿಂದ ಈ ರೋಗ ಹರಡುತ್ತದೆ. ಜೊತೆಗೆ ಆ ಹಕ್ಕಿಗಳ ಶ್ವಾಶೋಚ್ವಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ ಎಂದು ಅಧಿಕಾರಿಗಳು ಹಕ್ಕಿಜ್ವರದ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಮುಂದಾಗಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!