2,000 ರೂ. ನೋಟು ಹಿಂಪಡೆದ RBI: ಹಾಗಾದರೆ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (2000 Notes Withdrawn) ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಹಿಂತೆಗೆದುಕೊಂಡಿದೆ.

2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ನೀಡಲಾಗಿದ್ದು, ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.

ಸದ್ಯ ಆರ್‌ಬಿಐ ಹೊರಡಿಸಿರುವ ಆದೇಶದ ಕುರಿತು ಕಾಡುವ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.

2,000 ರೂ ಮುಖಬೆಲೆಯ ನೋಟು ಹಿಂಪಡೆಯಲು ಏನು ಕಾರಣ?

ಆರ್‌ಬಿಐ ಕಾಯ್ದೆಯ ಸೆಕ್ಷನ್‌ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಇದಕ್ಕೆ ಕಾರಣ 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್‌ ನೋಟ್‌ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.

ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (2000 Notes Withdrawn) ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಹಿಂತೆಗೆದುಕೊಂಡಿದ್ದು, ಅಂದರೆ ಸಂಪೂರ್ಣ ಬ್ಯಾನ್ ಅಲ್ಲ. ಇಲ್ಲಿ ನೋಟುಗಳನ್ನು ಹಿಂತೆಗೆದುಕೊಂಡರೂ ಕೂಡ ನೋಟುಗಳ ಮಾನ್ಯತೆ ಇರಲಿದೆ.

2 ಸಾವಿರ ರೂ. ನೋಟು ಇರುವವರು ಏನು ಮಾಡಬೇಕು?

2 ಸಾವಿರ ರೂ. ನೋಟುಗಳು ಇರುವವರು ತಮ್ಮ ಹತ್ತಿರದ ಬ್ಯಾಂಕ್‌ಗಳು ಹಾಗೂ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ತೆರಳಿ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು. ಹಾಗೆಯೇ, ರೆಗ್ಯುಲೇಟರಿ ನಿಯಮಗಳು ಹಾಗೂ ಕೆವೈಸಿ ಅನುಸಾರ ನಿಮ್ಮ ಬ್ಯಾಂಕ್‌ ಖಾತೆಗಳಿಗೂ ಠೇವಣಿ ಮಾಡಿಕೊಳ್ಳಬಹುದು.

ಎಕ್ಸ್‌ಚೇಂಜ್‌ ಮಾಡುವಾಗ ಲಿಮಿಟ್‌

ಒಮ್ಮೆ ಒಬ್ಬ ವ್ಯಕ್ತಿಯು ಬ್ಯಾಂಕ್‌ಗೆ 2 ಸಾವಿರ ರೂ. ಮುಖಬೆಲೆಯ 10 ನೋಟುಗಳು ಅಂದರೆ, 20 ಸಾವಿರ ರೂ. ನೀಡಿ ಎಕ್ಸ್‌ಚೇಂಜ್‌ ಮಾಡಿಕೊಳ್ಳುವ ಮಿತಿ ಇದೆ. ಆದ್ರೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಯಾವುದೇ ಮಿತಿ ಇಲ್ಲ. 2,000 ರೂ ಮುಖಬೆಲೆಯ ಎಷ್ಟು ಬೇಕಾದರೂ ನೋಟುಗಳನ್ನು ಅಕೌಂಟ್​ಗೆ ಡೆಪಾಸಿಟ್ ಮಾಡಬಹುದು.

ನೋಟುಗಳ ಎಕ್ಸ್‌ಚೇಂಜ್‌ಗೆ ಯಾವುದೇ ಶುಲ್ಕ ವಿರುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!