ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರ ಐಪಿಎಲ್ಗೆ ಈಗಾಗಲೇ ಸೇರ್ಪಡೆಯಾಗಿರುವ ನೂತನ ಫ್ರಾಂಚೈಸಿ ಅಹ್ಮದಾಬಾದ್ಗೆ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕನಾಗುವ ಸಾಧ್ಯತೆಯಿದೆ.
ಈಗಾಗಲೇ ಅಹ್ಮದಾಬಾದ್ ಫ್ರಾಂಚೈಸಿ ಆಶಿಷ್ ನೆಹ್ರಾರನ್ನು ತಂಡದ ಮುಖ್ಯ ಕೋಚ್ ಆಗಿ, ಕೋಚ್ ಗ್ಯಾರಿ ಕಸ್ಟರ್ನ್ ಮೆಂಟರ್ ಆಗಿ ಮತ್ತು ವಿಕ್ರಮ್ ಸೋಲಂಕಿ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕ ಮಾಡಿದ್ದಾರೆ.
ಇದೀಗ ಮುಂಬೈ ಇಂಡಿಯನ್ಸ್ ನ ಚಾಂಪಿಯನ್ ಹೀರೋ, ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಬೆಡ್ಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಅಹ್ಮದಾಬಾದ್ ಫ್ರಾಂಚೈಸಿಗೆಬಿಸಿಸಿಐ ಸೋಮವಾರ ಕ್ಲೀನ್ ಚಿಟ್ ನೀಡಿದ್ದು, ಫ್ರಾಂಚೈಸಿಯಲ್ಲಿ ಮುಂದುವರಿಯಲು ಅಧಿಕೃತ ಒಪ್ಪಂದ ಪತ್ರವನ್ನು ನೀಡಿದೆ. ಆದ್ದರಿಂದ ಫ್ರಾಂಚೈಸಿ ಇದೇ ತಿಂಗಳ 31ರೊಳಗೆ ನೇರವಾಗಿ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಲು ಚಿಂತನೆ ನಡೆಸಿದೆ .ಇವರ ಜೊತೆಗೆ ಮುಂಬೈ ಇಂಡಿಯನ್ಸ್ನ ಸಹ ಆಟಗಾರ ವಿಕೆಟ್ ಕೀಪರ್ ಇಶಾನ್ ಕಿಶನ್ ಮತ್ತು ಅಫ್ಘಾನಿಸ್ತಾನ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ರನ್ನು ಡ್ರಾಪ್ ಮಾಡಿಕೊಳ್ಳಬಹುದು ಎಂದು ತಿಳಿದುಬಂದಿದೆ.