2022ರ ಐಪಿಎಲ್​ಗೆ ಅಹ್ಮದಾಬಾದ್​​ಗೆ ಸಿಕ್ಕಿತು ʼBCCIʼ ಅನುಮೋದನೆ: ಹಾರ್ದಿಕ್ ಪಾಂಡ್ಯ ಆಗ್ತಾರಾ ಕ್ಯಾಪ್ಟನ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್:

2022ರ ಐಪಿಎಲ್​ಗೆ ಈಗಾಗಲೇ ಸೇರ್ಪಡೆಯಾಗಿರುವ ನೂತನ ಫ್ರಾಂಚೈಸಿ ಅಹ್ಮದಾಬಾದ್​​ಗೆ ಟೀಮ್ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ನಾಯಕನಾಗುವ ಸಾಧ್ಯತೆಯಿದೆ.
ಈಗಾಗಲೇ ಅಹ್ಮದಾಬಾದ್​ ಫ್ರಾಂಚೈಸಿ ಆಶಿಷ್​ ನೆಹ್ರಾರನ್ನು ತಂಡದ ಮುಖ್ಯ ಕೋಚ್​ ಆಗಿ, ಕೋಚ್​ ಗ್ಯಾರಿ ಕಸ್ಟರ್ನ್​ ಮೆಂಟರ್​ ಆಗಿ ಮತ್ತು ವಿಕ್ರಮ್ ಸೋಲಂಕಿ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕ ಮಾಡಿದ್ದಾರೆ.
ಇದೀಗ ಮುಂಬೈ ಇಂಡಿಯನ್ಸ್​ ನ ಚಾಂಪಿಯನ್ ಹೀರೋ, ಭಾರತದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಬೆಡ್ಡಿಂಗ್​ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಅಹ್ಮದಾಬಾದ್​ ಫ್ರಾಂಚೈಸಿಗೆಬಿಸಿಸಿಐ ಸೋಮವಾರ ಕ್ಲೀನ್​ ಚಿಟ್ ನೀಡಿದ್ದು, ಫ್ರಾಂಚೈಸಿಯಲ್ಲಿ ಮುಂದುವರಿಯಲು ಅಧಿಕೃತ ಒಪ್ಪಂದ ಪತ್ರವನ್ನು ನೀಡಿದೆ. ಆದ್ದರಿಂದ ಫ್ರಾಂಚೈಸಿ ಇದೇ ತಿಂಗಳ 31ರೊಳಗೆ ನೇರವಾಗಿ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
​ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಲು ಚಿಂತನೆ ನಡೆಸಿದೆ .ಇವರ ಜೊತೆಗೆ ಮುಂಬೈ ಇಂಡಿಯನ್ಸ್​ನ ಸಹ ಆಟಗಾರ ವಿಕೆಟ್ ಕೀಪರ್ ಇಶಾನ್ ಕಿಶನ್​ ಮತ್ತು ಅಫ್ಘಾನಿಸ್ತಾನ ಸ್ಟಾರ್ ಸ್ಪಿನ್ನರ್​ ರಶೀದ್ ಖಾನ್​ರನ್ನು ಡ್ರಾಪ್ ಮಾಡಿಕೊಳ್ಳಬಹುದು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!