ಸತತ 8 ಸೋಲುಗಳ ಬಳಿಕ ಕೊನೆಗೂ ಗೆದ್ದ ಮುಂಬೈ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸತತ ಎಂಟು ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಕೊನೆಗೂ ೧5ನೇ ಆವೃತ್ತಿಯ ಟೂರ್ನಿಯಲ್ಲಿ ಮೊದಲ ಗೆಲುವು ಕಾಣುವ ಮೂಲಕ ನಿಟ್ಟುಸಿರು ಬಿಟ್ಟಿದೆ.
ರಾಜಸ್ಥಾನ ನೀಡಿದ 159 ರನ್‍ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈಗೆ ಸೂರ್ಯಕುಮಾರ್ ಯಾದವ್ 51 ರನ್ (39 ಎಸೆತ, 5 ಬೌಂಡರಿ, 2 ಸಿಕ್ಸ್), ತಿಲಕ್ ವರ್ಮಾ ಆಟ 35 ರನ್ (30 ಎಸೆತ, 1 ಬೌಂಡರಿ, 2 ಸಿಕ್ಸ್), ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ ಅಜೇಯ 26 ರನ್ ( 9 ಎಸೆತ, 2 ಬೌಂಡರಿ, 1 ಸಿಕ್ಸ್) ಗೆಲುವು ತಂಸದುಕೊಟ್ಟರು. ಅಂತಿಮವಾಗಿ ಮುಂಬೈ 19.2 ಓವರ್‌ ಗಳಲ್ಲಿ 5 ವಿಕೆಟ್‍ಗಳಿಂದ ಮೊದಲ ಗೆಲುವನ್ನು ಒಲಿಸಿಕೊಂಡಿತು.
ಈ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರಲು ವಿಫಲವಾಯ್ತು. ದೇವದತ್ ಪಡಿಕ್ಕಲ್ 15 ರನ್, ಸಂಜು ಸ್ಯಾಮ್ಸನ್ 16 ರನ್, ಡೇರಿಲ್ ಮಿಚೆಲ್ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಮತ್ತೊಂಡೆಡೆ ಕ್ರೀಸ್‌ ಗೆ ಅಂಟಿಕೊಂಡು ಅಬ್ಬರಿಸಲಾರಂಭಿಸಿದ ಜೋಸ್ ಬಟ್ಲರ್ ಬಟ್ಲರ್ 67 ರನ್ (52 ಎಸೆತ, 5 ಬೌಂಡರಿ, 4 ಸಿಕ್ಸ್) ಸಿಡಿಸಿ ಔಟ್ ಆದರು. ಕೆಲ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ 21 ರನ್ (9 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ರನ್ ವೇಗ ಹೆಚ್ಚಿಸಿದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು.
ಮುಂಬೈ ಪರ ಹೃತಿಕ್ ಶೋಕೀನ್ ಮತ್ತು ರಿಲೆ ಮೆರೆಡಿತ್ ತಲಾ 2 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ ಮತ್ತು ಡೇನಿಯಲ್ ಸ್ಯಾಮ್ಸ್ ತಲಾ 1 ವಿಕೆಟ್ ಕಬಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!