ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್‌ಗೆ 2023ರ ವರ್ಷದ ಭಾರತೀಯ ಪ್ರಶಸ್ತಿ ದೊರೆತಿದೆ.
ಮೂರು ದಶಕಗಳಿಂದಲೂ ಬಾಲಿವುಡ್‌ನಲ್ಲಿ ಹೀರೋ ಆಗಿ ಮೆರೆಯುತ್ತಿರುವ ಶಾರುಖ್ ಖಾನ್‌ಗೆ ವರ್ಷದ ಭಾರತೀಯ ಪ್ರಶಸ್ತಿ ಸಿಕ್ಕಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಬದುಕಿನಲ್ಲಿ ಯಾವುದೂ ಸುಲಭವಾಗಿ ಸಿಗೋದಿಲ್ಲ, ಸ್ಟಾರ್ ಆದ ಮಾತ್ರಕ್ಕೆ ಕಷ್ಟಗಳಿಲ್ಲ ಎಂದು ಅರ್ಥವಲ್ಲ. ಕೆಲ ವರ್ಷಗಳಲ್ಲಿ ಸಾಕಷ್ಟು ನೋವು ತಿಂದಿದ್ದೇನೆ, ನನ್ನ ಕುಟುಂಬದವರು ಕಷ್ಟ ಅನುಭವಿಸಿದ್ದಾರೆ, ಸಾಕಷ್ಟು ಸಿನಿಮಾ ಫ್ಲಾಪ್ ಆಯಿತು. ಶಾರುಖ್ ಎರಾ ಮುಗಿದು ಹೋಯ್ತು, ಇನ್ನು ನಿವೃತ್ತಿ ಪಡೆಯಬೇಕು ಎನ್ನುವ ಮಾತುಗಳು ಕೇಳಿ ಬಂದವು. ಆದರೆ ಯಾವ ಮಾತಿಗೂ ಕಿವಿಗೊಡಲಿಲ್ಲ.
ಕೆಟ್ಟ ಘಟನೆಗಳಿಂದ ಪಾಠ ಕಲಿತೆ, ಶಾಂತವಾಗಿ ಕೆಲಸ ಮಾಡುವುದನ್ನು ಕಲಿತೆ. ಜೀವನದಲ್ಲಿ ಎಲ್ಲವೂ ಸರಿಯಾಗೋಕೆ ಸಾಧ್ಯತೆ ಇಲ್ಲ. ಜವಾನ್, ಪಠಾಣ್ ಹಾಗೂ ಡಂಕಿ ಮತ್ತೊಂದು ತಿರುವು ನೀಡಿದೆ. ನನ್ನ ಪ್ರಶಸ್ತಿಯನ್ನು ಮಕ್ಕಳಿಗೆ ನೀಡುತ್ತೇನೆ ಎಂದು ಶಾರುಖ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.