ರಾಜ್ಯಕ್ಕೆ ಮತ್ತೆ ಕಾಲಿಟ್ಟ ಚಡ್ಡಿ ಗ್ಯಾಂಗ್, ಇವ್ರು ಕಾಣಿಸಿದ್ರೆ ತಕ್ಷಣ ಪೊಲೀಸರಿಗೆ ಕರೆ ಮಾಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಜ್ಯ ಕಳ್ಳರ ಚಡ್ಡಿ ಗ್ಯಾಂಗ್ ಇದೀಗ ಮತ್ತೆ ರಾಜ್ಯಕ್ಕೆ ಕಾಲಿಟ್ಟಿದೆ. ವಿಜಯಪುರದಲ್ಲಿ ಚಡ್ಡಿಗ್ಯಾಂಗ್ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಮನೆಯೊಂದರ ಕಾಂಪೌಂಡ್ ಹಾರಿ ಒಳಕ್ಕೆ ಬರುತ್ತಿರುವ ದೃಶ್ಯ ಕಂಡು ಗುಮ್ಮಟ ನಗರಿ ಜನ ಬೆಚ್ಚಿಬಿದ್ದಿದ್ದಾರೆ. ಇವರು ಮಂಕಿ ಕ್ಯಾಪ್, ಬನಿಯನ್ ಹಾಗೂ ಚಡ್ಡಿ ಧರಿಸಿರುತ್ತಾರೆ.

ಈಗಾಗಲೇ ವಿಜಯನಗರ ಪೊಲೀಸರು ರಸ್ತೆಗಳಲ್ಲಿ ಅನೌನ್ಸ್‌ಮೆಂಟ್ ಮಾಡಿಸುತ್ತಿದ್ದು, ಈ ಕಳ್ಳರು ಕಣ್ಣಿಗೆ ಬಿದ್ದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!