2024 ಲೋಕಸಭಾ ಚುನಾವಣೆ: ಪ್ರಮುಖ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಹೊಸ ವೇಳಾಪಟ್ಟಿ ವಿವರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹು ನಿರೀಕ್ಷಿತ ಲೋಕಸಭಾ ಚುನಾವಣೆ 2024 ರ ದಿನಾಂಕವನ್ನು ಪ್ರಕಟಿಸಲಾಗಿದೆ. ಏಪ್ರಿಲ್ 19 ರಂದು ಏಳು ಹಂತದ ಮತದಾನ ಆರಂಭವಾಗಲಿದ್ದು, ದೇಶಾದ್ಯಂತ ತೀವ್ರ ರಾಜಕೀಯ ಚಟುವಟಿಕೆ ನಡೆದಿದೆ. ಹೆಚ್ಚುವರಿಯಾಗಿ, ದೇಶವು ಪ್ರಮುಖ ಪ್ರವೇಶ ಪರೀಕ್ಷೆಗಳು ಮತ್ತು ವೃತ್ತಿಪರ ಸಾಮರ್ಥ್ಯ ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಿದೆ. ಅದರ ಬಗ್ಗೆ ವಿವರಗಳು ಇಲ್ಲಿವೆ.

ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್‌ 2024
UPSC ತನ್ನ ನಾಗರಿಕ ಸೇವೆಗಳ ಪರೀಕ್ಷೆ 2024ರ ವೇಳಾಪಟ್ಟಿಯನ್ನು ಆರಂಭದಲ್ಲಿ ಮೇ 26ಕ್ಕೆ ನಿಗದಿಯಾಗಿದ್ದ ಪರೀಕ್ಷೆ ಜೂನ್ 16ಕ್ಕೆ ಮುಂದೂಡಲಾಗಿದೆ.

ನೀಟ್‌ ಪಿಜಿ 2024
ನೀಟ್‌ ಪಿಜಿ 2024. ಜುಲೈ 7ರಂದು ನಡೆಯಬೇಕಿದ್ದ ಪರೀಕ್ಷೆ ಜೂನ್‌ 23ಕ್ಕೆ ನಡೆಯಲಿದೆ. ಫಲಿತಾಂಶಗಳು ಈ ಹಿಂದೆ ಘೋಷಿಸಿದಂತೆ ಜುಲೈ 15ರೊಳಗೆ ಪ್ರಕಟವಾಗಲಿದೆ.

ಜೆಇಇ ಮೇನ್‌ 2024
JEE ಮೇನ್ 2024ರ ಪರೀಕ್ಷೆಯ ದಿನಾಂಕಗಳನ್ನು ಹೊಸ ವೇಳಾಪಟ್ಟಿಯ ಪ್ರಕಾರ ಜೆಇಇ ಮೇನ್‌ 2024 ಸೆಷನ್ 2 ಅನ್ನು ಏಪ್ರಿಲ್ 4 ಮತ್ತು 12ರ ನಡುವೆ ನಡೆಸಲಾಗುತ್ತದೆ. ಪೇಪರ್ 1 (ಬಿಇ / ಬಿಟೆಕ್) ಏಪ್ರಿಲ್ 4, 5, 6, 8 ಮತ್ತು 9ರಂದು ನಡೆಯಲಿದ್ದು, ಪೇಪರ್ 2 ಏಪ್ರಿಲ್ 12ರಂದು ನಡೆಯಲಿದೆ.

ಕರ್ನಾಟಕ-ಪಿಎಸ್‌ಐ ಪರೀಕ್ಷೆ
ಮೇ 8ರಂದು ನಡೆಸಲಿದ್ದ ಪಿಎಸ್‌ಐ ಪರೀಕ್ಷೆಯ ದಿನಾಂಕವನ್ನೂ ಕರ್ನಾಟಕದಲ್ಲಿ ಚುನಾವಣೆ ಮುಗಿದ ಬಳಿಕ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಎಸ್‌ ಇಎಪಿಸಿಇಟಿ 2024
ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ಫಾರ್ಮಸಿ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 9, 10, 11 ಮತ್ತು 12ರಂದು ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!