ನೇಕಾರ ಮಗನಿಗೆ ವಾರ್ಷಿಕ 21.35 ಲಕ್ಷ ರೂ. ಆಫರ್!!

ಹೊಸದಿಗಂತ ವರದಿರಬಕವಿ-ಬನಹಟ್ಟಿ:

ದುಡಿದಿದ್ದು ಹೊಟ್ಟೆ-ಬಟ್ಟೆಗೆ ಸಾಕು ಎಂಬಂತಹ ಆರ್ಥಿಕ ಸ್ಥಿತಿಯಲ್ಲಿ ಬದುಕು ನಡೆಸುವ ತಾಲೂಕಿನ ರಬಕವಿಯ ಅಣ್ಣಪ್ಪ ಚಾಪೀ ಎಂಬುವರ ಮಗ ಗುರು, ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್(ಎಸ್ಎಸ್ಐಆರ್)ನಿಂದ ವಾರ್ಷಿಕ 21.35 ಲಕ್ಷ ರೂ. ಗಳ ಕ್ಯಾಂಪಸ್ ಪ್ಲೇಸ್ಮೆಂಟ್ ಆಫರ್ ಪಡೆದು ದಾಖಲೆ ಮಾಡಿದ್ದಾರೆ.

ವಿದ್ಯಾರ್ಥಿ ಗುರು ಚಾಪೀ ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಯಾಗಿದ್ದು, ಕಳೆದ 43 ವರ್ಷಗಳಲ್ಲಿ ಕಾಲೇಜಿನ ಜಿಐಟಿಯ ವಿದ್ಯಾರ್ಥಿ ಪಡೆದ ಅತ್ಯಧಿಕ ಕ್ಯಾಂಪಸ್ ಉದ್ಯೋಗದ ವಿದ್ಯಮಾನ ಇದಾಗಿದೆ. ಗುರು ಚಾಪೀ ಸಾಧನೆಗೆ ಕುಟುಂಬ, ನೇಕಾರ ಸಮುದಾಯ ಹಾಗು ಕುರುಹಿನಶೆಟ್ಟಿ ಸಮಾಜ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಮುಗ್ಗಟ್ಟಿನ ನಡುವೆಯೂ ಗುರಿಯನ್ನು ಸಾಧಿಸಲು ಹಾಗೂ ಹಿಡಿದ ಛಲಕ್ಕೆ ಸರ್ಕಾರದ ಸ್ಕಾಲರ್ಶಿಪ್ ಹಾಗೂ ಶಿಕ್ಷಣ ಸಾಲ ಸಹಕಾರಿಯಾಯಿತು ಎಂದು ಸಾಧಕ ವಿದ್ಯಾರ್ಥಿ ಗುರು ಚಾಪೀ ತಿಳಿಸಿದರು. ಬಿ.ಇ. ಪ್ರವೇಶಾತಿ ಪಡೆಯುವ ಸಂದರ್ಭ ಒಟ್ಟು ನಾಲ್ಕೈದು ಲಕ್ಷ ರೂ.ಗಳ ವೆಚ್ಚವಾಗುವುದರಿಂದ ಕೂಲಿ ನೇಕಾರ ಮಾಡುತ್ತಿದ್ದ ತನ್ನ ತಂದೆ ಅಣ್ಣಪ್ಪ ಚಾಪೀಗೆ ಜವಳಿ ಉದ್ಯಮಿ ಚಿದಾನಂದ ಬೆಳಗಲಿ ಆರ್ಥಿಕ ನೆರವು ನೀಡಿದರೆಂದು ವಿದ್ಯಾರ್ಥಿ ಮನದಾಳದಿಂದ ಸ್ಮರಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!