ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಮಲ್ಕನ್‌ಗಿರಿ ಈಗ ನಕ್ಸಲ್ ಮುಕ್ತ ಜಿಲ್ಲೆಯಾಗಿದೆ. ಇಂದು 21 ಲಕ್ಷ ರೂಪಾಯಿ ಬಹುಮಾನ ಘೋಷಿತ ಮಾವೋವಾದಿ ಸುಖರಾಮ್ ಮಾರ್ಕಮ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಮೂಲಕ ಈ ಪ್ರದೇಶ ನಕ್ಸಲ್ ಚಟುವಟಿಕೆಯಿಂದ ಮುಕ್ತಿಗೊಂಡಿದೆ.
ಈ ಕುರಿತು ಮಲ್ಕನ್‌ಗಿರಿ ಎಸ್‌ಪಿ ಬಿನೋದ್ ಪಾಟೀಲ್ ಹೆಚ್ ಮಾಹಿತಿನ್ ನೀಡಿದ್ದು, ನಿಷೇಧಿತ ಸಿಪಿಐ ಸಂಘಟನೆಯ ಪ್ರದೇಶ ಸಮಿತಿ ಸದಸ್ಯ ಮಾರ್ಕಮ್ ಎಸ್‌ಎಲ್‌ಆರ್ ರೈಫಲ್, ಮದ್ದುಗುಂಡುಗಳು ಮತ್ತು ಇತರ ವಸ್ತುಗಳೊಂದಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಕಮ್ಗ ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿಯಲ್ಲಿ ನೀಡಲಾಗುವ ಎಲ್ಲಾ ಪ್ರಯೋಜನಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.



