October 7, 2026
Wednesday, October 7, 2026
spot_img

HEALTH | ಬೇಸಿಗೆಯಲ್ಲಿ ನೀರೇ ಬೆಸ್ಟ್‌ ಫ್ರೆಂಡ್‌, ದಿನಕ್ಕೆಷ್ಟು ಲೀಟರ್‌ ನೀರು ಕುಡಿದರೆ ಬೆಸ್ಟ್‌?

ಬೇಸಿಗೆಯಲ್ಲಿ ಯಾವ ಊಟ ತಿಂಡಿ ತಿಂದರೂ ಐಸ್‌ಕ್ರೀಂ ತಿಂದರೂ ನೀರು ಬೇಕೇ ಬೇಕು ಎನಿಸುತ್ತದೆ. ದಿನಕ್ಕೆ ಕಡಿಮೆಯೆಂದರೂ ಮೂರು ಲೀಟರ್‌ ನೀರು ಕುಡಿಯಿರಿ. ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ನೀರನ್ನು ಸೇವಿಸಿ. ಹೊರಗಡೆ ಇದೀರಿ ಇಂಟೆನ್ಸ್‌ ಹೀಟ್‌ನಲ್ಲಿದ್ದೀರಿ ಎಂದಾದರೆ ನಾಲ್ಕು ಲೀಟರ್‌ ನೀರು ಕೂಡ ಬೆಸ್ಟ್‌..

ಹೈಡ್ರೇಟ್‌ ಆಗಿರಲು ಟಿಪ್ಸ್‌

ಬಾಯಾರಿಕೆ ಆಗಲು ಕಾಯಬೇಡಿ. ಬಾಯಾರಿಕೆ ಅನ್ನೋದು ನಿರ್ಜಲೀಕರಣದ ಸೂಚನೆ. ಅಲ್ಲಿಯವರೆಗೂ ಸುಮ್ಮನೆ ಇರಬೇಡಿ. ಆಗಾಗ ನೀರು ಕುಡಿಯಿರಿ.

ಕೈಯಲ್ಲಿ, ಗಾಡಿಯಲ್ಲಿ ಯಾವಾಗಲೂ ಒಂದು ಬಾಟಲಿ ನೀರು ಇರಲಿ. ಸುಮ್ಮನೆ ಆದರೂ ನೀರನ್ನು ಕುಡಿಯಿರಿ.

ನೀರಿನ ಅಂಶವಿರುವ ತರಕಾರಿ, ಹಣ್ಣುಗಳನ್ನು ತಿನ್ನಿ. ಸೌತೆಕಾಯಿ, ಕಲ್ಲಂಗಡಿ, ಆರೆಂಜ್‌ ಟೊಮ್ಯಾಟೊಗೆ ಮಣೆ ಹಾಕಿ

ದೇಹದಿಂದ ನೀರಿನ ಅಂಶವನ್ನು ಹೀರುವ ಸಕ್ಕರೆಯುಕ್ತ ಜ್ಯೂಸ್‌ ಹಾಗೂ ಕಾಫಿಯ ಸೇವನೆ ಕಡಿಮೆ ಮಾಡಿ.

ನಿಮ್ಮ ಯೂರಿನ್‌ ಬಣ್ಣದ ಬಗ್ಗೆ ಗಮನ ಇರಲಿ. ತಿಳಿ ಹಳದಿ ಬಣ್ಣದ ಯುರಿನ್‌ ಎಂದರೆ ದೇಹದಲ್ಲಿ ನೀರಿದೆ ಎಂದರ್ಥ.

Must Read