Thursday, July 7, 2022

Latest Posts

ನಾಗಾಲ್ಯಾಂಡ್‌ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಒಂದೇದಿನ 21 ಶಾಸಕರು ಪಕ್ಷಾಂತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಾಗಾಲ್ಯಾಂಡ್‌ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನ 21 ಶಾಸಕರು ಶುಕ್ರವಾರ ಮುಖ್ಯಮಂತ್ರಿ ನೆಫಿಯು ರಿಯೊ ಅವರ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಗೆ ಸೇರ್ಪಡೆಗೊಂಡಿದ್ದಾರೆ.
ವಿಧಾನ ಸಭಾ ಚುನಾವಣೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ನಡುವೆ ರಾಜ್ಯದಲ್ಲಿ ಅಚ್ಚರಿ ಮೂಡಿಸುವಂತಹ ರಾಜಕೀಯ ಬೆಳವಣೆಗೆಗಳು ಘಟಿಸುತ್ತಿವೆ.
2೧ ಎನ್‌ಪಿಎಫ್‌ ಶಾಸಕರ ಸೇರ್ಪಡೆಯೊಂದಿಗೆ 60 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಪಿಪಿ ಪಕ್ಷದ ಬಲ 42ಕ್ಕೇರಿದೆ.
ಎನ್‌ಪಿಎಫ್ ಶಾಸಕರ ಬಲ ನಾಲ್ವರು ಶಾಸಕ ಸ್ಥಾನಗಳಿಗಿಳಿದ್ದರೆ, ಬಿಜೆಪಿ 12 ಮತ್ತು ಇಬ್ಬರು ಸ್ವತಂತ್ರ ಸದಸ್ಯರಿದ್ದಾರೆ. 21 ಎನ್‌ಪಿಎಫ್ ಶಾಸಕರು ಪಕ್ಷ ಬದಲಾಯಿಸುವ ನಿರ್ಧಾರವನ್ನು ಅಸೆಂಬ್ಲಿ ಸ್ಪೀಕರ್ ಶೇರಿಂಗೈನ್ ಲಾಂಗ್‌ಕುಮರ್ ಒಪ್ಪಿಕೊಂಡಿದ್ದಾರೆ.
ನಾಗಾಲ್ಯಾಂಡ್ ನಲ್ಲಿನ ರಾಜಕೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿಪಕ್ಷಗಳಿಲ್ಲದ ʼಸರ್ವಪಕ್ಷಗಳʼ ಸರ್ಕಾರವಾದ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (ಯುಡಿಎ) ರಚಿಸಲಾಗಿತ್ತು. ಎನ್‌ಪಿಎಫ್, ಎನ್‌ಡಿಪಿಪಿ ಮತ್ತು ಬಿಜೆಪಿಯನ್ನು ಒಳಗೊಂಡಿರುವ ಆಡಳಿತಾರೂಢ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್‌ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.
ಮುಂಬರುವ ಚುನಾವಣೆಯಲ್ಲಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಸ್ವತಂತ್ರ್ಯವಾಗಿ ಸ್ಪರ್ಧಿಸುವುದಾಗಿ ಪಕ್ಷದ ಮುಖ್ಯಸ್ಥರು ಘೋಷಿಸಿದ್ದು ಪಕ್ಷದಲ್ಲಿನ ಭಿನ್ನಮತಕ್ಕೆ ಕಾರಣವಾಗಿತ್ತು. ಪ್ರಬಲವಾದ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷವು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಪಕ್ಷಾಂತರಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss