ಅತ್ಯಂತ ಕಿರಿಯ ವಯಸ್ಸಿಗೇ ಸರಪಂಚ್‌ ಆದ 21ರ ಹರೆಯದ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಣ್ಣುಮಕ್ಕಳು ಯಾವ ಕ್ರೇತ್ರದಲ್ಲೂ ಹಿಂದೆ, ಪ್ರತಿಯೊಂದರಲ್ಲೂ ಒಂದು ಹೆಜ್ಜೆ ಮುಂದೆ ಇದ್ದಾರೆ. ಇದೀಗ ಮಧ್ಯಪ್ರದೇಶದ ಉಜ್ಜಯಿನಿಯ 21 ವರ್ಷದ ಯುವತಿ ಲಕ್ಷಿಕಾ ದಾಗರ್ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮೂರು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಗೆಲುವಿನೊಂದಿಗೆ ಸರಪಂಚ್ ಹುದೆಯನ್ನು ಅಲಂಕರಿಸಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಈ ವಿಜಯ ದಕ್ಕಿರುವುದು ಇನ್ನಷ್ಟು ರೋಚಕವಾಗಿದೆ.

ದಾಗರ್ ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ, ಪ್ರಸ್ತುತ ಉಜ್ಜಯಿನಿಯಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಅವರು, ನಾಮಪತ್ರ ಸಲ್ಲಿಸಿದ ಬಳಿಕ ಹಳ್ಳಿಗೆ ಸೇವೆ ಸಲ್ಲಿಸುವುದೇ ತನ್ನ ಗುರಿ ಮತ್ತು ಅದು ತನ್ನ ಯಶಸ್ಸಿನ ಹಿಂದಿನ ಪ್ರೇರಣೆ ಎಂದು ಲಕ್ಷಿಕಾ ದಾಗರ್ ಹೇಳಿದ್ದಾರೆ.

ಕುಡಿಯುವ ನೀರು, ಚರಂಡಿ, ಬೀದಿ ದೀಪದಂತಹ ಸಮಸ್ಯೆಗಳನ್ನು ಪರಿಹರಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಜತೆಗೆ ವಸತಿ ರಹಿತರಿಗೆ ವಸತಿ ಯೋಜನೆಯೊಂದಿಗೆ ಮನೆ ನೀಡುವ ಭರವಸೆ ನೀಡಿದ್ದಾರೆ. ಲಕ್ಷಿಕಾ ಅವರೊಂದಿಗೆ ಇತರ ಏಳು ಅಭ್ಯರ್ಥಿಗಳು ಸರಪಂಚ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲರನ್ನು ಹಿಂದಿಕ್ಕಿ ಅತ್ಯಂತ ಚಿಕ್ಕ ವಯಸ್ಸಿಗೇ ಮಹತ್ತರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!