ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗಡಿ ದಾಟಿದ 21,000 ಕೋಟಿ ರೂ. ರಕ್ಷಣಾ ರಫ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ.

2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 21,083 ಕೋಟಿಗೆ ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿಗೆಯಾಗಿದೆ. ಈ ವಿಚಾರವನ್ನು ಭಾರತದ ಜನರಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇ, 2023 ರಲ್ಲಿ ನೈಜೀರಿಯಾದಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ರಕ್ಷಣಾ ಸಚಿವರು ಆತ್ಮನಿರ್ಭರ್ ಭಾರತ್ (Aatmanirbharta) ಮತ್ತು ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ರಫ್ತು ಮಹತ್ವದ ಪ್ರಗತಿಯ ಗುರಿಯನ್ನು ಸಾಧಿಸುವ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಮೇಕ್ ಇನ್ ಇಂಡಿಯಾ‌ (Make in India), ಮೇಕ್ ಫಾರ್‌ ವರ್ಲ್ಡ್ ಎಂದು ಪ್ರತಿಪಾದಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!