ʻಡೆವಿಲ್ʼ ಸಿನಿಮಾಗೆ ಬರೋಬ್ಬರಿ 22 ಕೋಟಿ ರೂ. ಪಡೆದ ದರ್ಶನ್‌: ನಂಬಿ ಮೋಸ ಹೋದ್ರಾ ನಿರ್ಮಾಪಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್‌ ಬಂಧನವಾಗಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದರ ಬೆನ್ನಲ್ಲೇ ಇತ್ತ ದರ್ಶನ್‌ ಅಭಿನಯನದ ʻಡೆವಿಲ್‌ʼ ಸಿನಿಮಾ ರಿಲೀಸ್‌ಗೆ ಕಾಯುತ್ತಿದೆ. ಇದೀಗ ದರ್ಶನ್‌ ಡೆವಿಲ್‌ ಸಿನಿಮಾಗಾಗಿ 22 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಮುಂಚೆಯೂ ಹಲವು ಪ್ರಕರಣಗಳಲ್ಲಿ ದರ್ಶನ್‌ ಪೊಲೀಸರು ಅತಿಥಿಯಾಗಿದ್ದರೂ ಈ ಬಾರಿ ಗಂಭೀರ ಪ್ರಕರಣವಾಗಿರುವುದರಿಂದ ದರ್ಶನ್‌ಗೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗುತ್ತಿದೆ.

ಕಾಟೇರ ಯಶಸ್ಸಿನ ಬಳಿಕ ಡೆವಿಲ್‌ ಎಂಬ ಸಿನಿಮಾದಲ್ಲಿ ದರ್ಶನ್‌ ನಟಿಸುತ್ತಿದ್ದಾರೆ. ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಈ ಸಿನಿಮಾದ ಶೂಟಿಂಗ್‌ ಭರದಿಂದ ನಡೆಯುತ್ತಿತ್ತು. ಈ ಚಿತ್ರದ ಗ್ಲಿಂಪ್ಸ್‌ ವಿಡಿಯೋ ಕೂಡ ರಿಲೀಸ್‌ ಮಾಡಲಾಗಿತ್ತು. ಡೆವಿಲ್‌ನಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಕೂಡ ನಟಿಸುತ್ತಿದ್ದಾರೆ. ಪ್ರಕಾಶ್‌ ವೀರ್‌ ನಿರ್ದೇಶನದ ಡೆವಿಲ್‌ ಸಿನಿಮಾಗೆ ದರ್ಶನ್‌ ಬರೋಬ್ಬರಿ 22 ಕೋಟಿ ರೂ. ಪಡೆದುಕೊಂಡಿದ್ದರು.

ಟೀಸರ್ ನಿಂದಲೇ ಕೌತುಕ ಹುಟ್ಟಿಸಿದ ಡೆವಿಲ್ ಸಿನಿಮಾ ಕೇವಲ 25 ದಿನ ಶೂಟಿಂಗ್ ಆಗಿದೆ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಆಕ್ಷನ್ ಸಿಕ್ವೇನ್ಸ್ ಮಾಡೋದಿಕ್ಕೆ ಹೋಗಿ ಎಡಗೈಯಿ ಮುರಿದುಕೊಂಡರು. ಹೀಗಾಗಿ ದಾಸ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಈ ಸಿನಿಮಾ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು. ಈ ಘಟನೆ ನಡೆಯುವ ಎರಡು ದಿನದ ಹಿಂದೆ ಡೆವಿಲ್ ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ನಿನ್ನೆ ದರ್ಶನ್ ಭಾಗವಹಿಸಬೇಕಿತ್ತು ಅಷ್ಟರಲ್ಲಿ ಡಿ ಬಾಸ್ ಪೊಲೀಸರ ಅತಿಥಿಯಾಗಿದ್ದರು.

ಈ ಕಡೆ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ನಿರ್ದೇಶಕ ಪ್ರಕಾಶ್ ಶೂಟಿಂಗ್‌ವನ್ನು ಸ್ಟಾಪ್ ಮಾಡಿದ್ದಾರೆ ಎನ್ನಲಾಗಿದೆ. ಡೆವಿಲ್ ಚಿತ್ರವನ್ನು ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡುತ್ತೇವೆ ಎಂದ ನಿರ್ದೇಶಕ ಪ್ರಕಾಶ್ ಇದೀಗ ಕಂಗಾಲು ಆಗಿದ್ದಾರೆ.

ಇದಾದ ಬಳಿಕ ಸಿಂಧೂರು ಲಕ್ಷ್ನಣ ಸಿನಿಮಾ ಒಪ್ಪಿಕೊಂಡಿದ್ದು, ಕ್ರಾಂತಿ ಸಿನಿಮಾ ಮಾಡಿದ್ದ ನಿರ್ಮಾಪಕ ಬಿ ಸುರೇಶ್ ನಿರ್ಮಾಣದ ಹಾಗು ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಶುರುವಾಗಬೇಕಿತ್ತು. ಆದರೆ ದರ್ಶನ್ ಎಡವಟ್ಟಿನಿಂದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಕೂಡ ಮುಂದಿನ ವರ್ಷಕ್ಕೆ ಹೋಗಲಿದೆ. ಈ ಸಿನಿಮಾ ದರ್ಶನ್ ಪಡೆದಿರೋ ಅಡ್ವಾನ್ಸ್ 3 ಕೋಟಿ ರೂ. ಯಂತೆ.

ಈ ಚಿತ್ರದ ಮಧ್ಯೆ ದರ್ಶನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದರು. ಅದು ಜೋಗಿ ಪ್ರೇಮ್ ನಿರ್ದೇಶನದ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೋಡಕ್ಷನ್ ದರ್ಶನ್ ಬಹುಕೋಟೆ ವೆಚ್ಚದ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಡ್ವಾನ್ಸ್ ಹಣ ಎಂದು ದರ್ಶನ್ 3 ರಿಂದ 5 ಕೋಟಿ ಪಡೆದಿದ್ದಾರೆ ಎನ್ನುವುದು ಗಾಂಧಿನಗರದ ಮಾತು.

ಈ ಪ್ರಾಜೆಕ್ಟ್ ಮುಗಿದ ಮೇಲೆ ದರ್ಶನ್ ಮತ್ತೆ ಜಗ್ಗುದಾದ ಸಿನಿಮಾ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.‌ ಬಹುಶಃ 2025ನೇ ವರ್ಷದ ಅಂತ್ಯದಲ್ಲಿ. ಈ ಚಿತ್ರಕ್ಕೆ ದರ್ಶನ್ ಮುಂಗಡ ಹಣ ಎಂದು 5 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಈ ಚಿತ್ರಗಳ ಬಳಿಕ ದರ್ಶನ್ ತೆಲುಗಿನ ಅತ್ತಾರಿಂಟಿಕಿ ದಾರೇದಿ ಚಿತ್ರದ ನಿರ್ಮಾಪಕರಾದ ಬಿ.ವಿ.ಎಸ್. ಎನ್ ಪ್ರಸಾದ್ ಜೊತೆ ಸಿನಿಮಾ ಮಾತಕಥೆ ಆಗಿ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ಈ ಸಿನಿಮಾ ಶುರುವಾಗೋದಿಕ್ಕೆ ಇನ್ನು ಒಂದು ವರ್ಷ ಆಗುತ್ತೆ. ಇದರ ಜತೆಗೆ ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಜೊತೆ ಚಿತ್ರ ಮಾಡುವುದಾಗಿ ದರ್ಶನ್ ಮಾತುಕತೆ ಆಗಿತ್ತು. ಈ ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ಹಣ ಅಂತಾ 25 ಲಕ್ಷ ಪಡೆದಿದ್ದಾರೆ ಎನ್ನಲಾಗುತ್ತಿದೆ. ಹಾಗೇ ಮತ್ತೊಬ್ಬ ಹೈದರಾಬಾದ್ ನಿರ್ಮಾಪಕ ರಘುನಾಥ್ ಎಂಬುವರ ಜತೆ ಸಿನಿಮಾ ಮಾತುಕತೆ ಆಗಿದೆ‌. ಈ ಚಿತ್ರಕ್ಕೂ ದರ್ಶನ್ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ ಎಂದು ಸುದ್ದಿ.

ಹೀಗಾಗಿ ದರ್ಶನ್‌ ಅವರನ್ನು ನಂಬಿಕೊಂಡು ಸಿನಿಮಾಗಳಿಗೆ ಈಗಾಗಲೇ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿರುವ ನಿರ್ಮಾಪಕರ ಗತಿ ಏನು? ಹಾಗೇ ಸಿನಿಮಾಗಳೆ ಬರುತ್ತಿಲ್ಲ ಎಂಬ ಗಾಸಿಪ್‌ಗಳ ಮಧ್ಯೆ ವರ್ಷಕ್ಕೆ ಒಂದೆರಡು ಸಿನಿಮಾ ಮಾಡುತ್ತಿದ್ದ ದರ್ಶನ್‌ ಜೈಲು ಪಾಲಾದರೆ ಏನು ಕಥೆ? ಎಂದು ಫ್ಯಾನ್ಸ್‌ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!