ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಾಕಿಸ್ತಾನದ ಕರಾಚಿ ಜೈಲಿನಿಂದ ಬಿಡುಗಡೆಯಾಗಿಡ್ಡ 22 ಭಾರತೀಯ ಮೀನುಗಾರರು ಮಂಗಳವಾರ ಗುಜರಾತ್ ನ ಗಿರ್ ಸೋಮನಾಥ ತಲುಪಿದರು.
ಗುಜರಾತಿನ ಕಡಲ ಗಡಿ ಬಳಿ ಮೀನುಗಾರಿಕೆ ಮಾಡುತ್ತಿದ್ದಾಗ ಏಪ್ರಿಲ್ 2021 ಮತ್ತು ಡಿಸೆಂಬರ್ 2022ರ ನಡುವಣ 22 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ನೌಕಾಪಡೆಯ ಭದ್ರತಾ ಸಂಸ್ಥೆ ಬಂಧಿಸಿತ್ತು.
ಇತ್ತ ಇನ್ನೂ ಸುಮಾರು 195 ಮೀನುಗಾರರು ಪಾಕಿಸ್ತಾನದ ಜೈಲ್ಲಿನಲ್ಲಿದ್ದಾರೆ ಎಂದು ವೆರಾವಲ್ ನ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ವಿಕೆ ಗೋಹೆಲ್ ತಿಳಿಸಿದ್ದಾರೆ. .
ಬಿಡುಗಡೆಯಾದ 22 ಮಂದಿ ಮೀನುಗಾರರಲ್ಲಿ 18 ಜನರು ಗುಜರಾತ್, ಮೂವರು ಡಿಯು ಮತ್ತು ಒಬ್ಬರು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಮೀನುಗಾರರ ಬಿಡುಗಡೆಗೆ ಮುಖ್ಯಮಂತ್ರಿ ಭೂಪೇಂದ್ರ ಬಘೇಲ್ ಹಾಗೂ ಕೃಷಿ ಸಚಿವ ರಾಘವ್ ಜಿ ಪಟೇಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಗುಜರಾತ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ನಂತರ ಸೋಮವಾರ ಸಂಜೆ ರೈಲಿನಲ್ಲಿ ಮೀನುಗಾರರು ವಡೋದರ ತಲುಪಿಸಿದರು. ವಡೋದರಿಂದ ಬಸ್ ಮೂಲಕ ಗಿರಿ್ ಸೋಮನಾಥ ಜಿಲ್ಲೆಯ ವರವಲ್ ತಲುಪಿದ್ದಾರೆ ಎಂದು ಗೋಹೆಲ್ ತಿಳಿಸಿದ್ದಾರೆ.