ತಮಿಳುನಾಡಿನಲ್ಲಿ 22 ವಿಗ್ರಹಗಳು ಧ್ವಂಸ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮಿಳುನಾಡಿನಲ್ಲಿ ಹಿಂದು ದೇವಾಲಯಗಳ ಮೇಲಿನ ದಾಳಿ ಮುಂದುವರೆದಿದ್ದು ಮತ್ತೆರಡು ದೇವಸ್ಥಾನಗಳ ಮೇಲೆ ದಾಳಿಯಾಗಿರುವುದು ವರದಿಯಾಗಿದೆ. ಕಾಂಚೀಪುರಂ ಜಿಲ್ಲೆಯ ಸಿಂಗುವರ್ಚತಿರಂ ಬಳಿಯ ಕಂಡಿವಕ್ಕಂನಲ್ಲಿದುಷ್ಕರ್ಮಿಗಳು ಎರಡು ದೇವಾಲಯಗಳಿಗೆ ಹಾನಿ ಮಾಡಿದ್ದಾರೆ.

ಮೂಲಗಳ ವರದಿ ಪ್ರಕಾರ 20ರಂದು ರಾತ್ರಿ 20ರಂದು ರಾತ್ರಿ ತುಳಸಾಪುರದ ಕರ್ಪಗ ವಿನಾಯಕ ದೇವಸ್ಥಾನಕ್ಕೆ ನುಗ್ಗಿದ ತಂಡ, ಮುರುಗನ್, ದಕ್ಷಿಣಾಮೂರ್ತಿ, ಪಾರ್ವತಿ, ದುರ್ಗ, ನಾಗತಮ್ಮನವರ, ನವಗ್ರಹ ಮೂರ್ತಿಗಳು, ತ್ರಿಶೂಲಗಳಿಗೆ ಹಾನಿ ಮಾಡಿ ಸಮೀಪದ ಖಾಲಿ ಜಾಗದಲ್ಲಿ ಎಸೆದಿದ್ದಾರೆ. ನಂತರ ಹತ್ತಿರದ ಲಕ್ಷ್ಮಿ ಅಮ್ಮನ್ ದೇವಸ್ಥಾನವನ್ನು ಪ್ರವೇಶಿಸಿ ಅಲ್ಲೂ ಕೂಡ ದುಷ್ಕೃತ್ಯ ನಡೆಸಿದೆ. ಎರಡೂ ದೇವಸ್ಥಾನಗಳಲ್ಲಿ ಸುಮಾರು 22 ವಿಗ್ರಹಗಳನ್ನು ದ್ವಂಸಗೊಳಿಸಲಾಗಿದೆ. ಈ ಕುರಿತು ವಿಧ್ವಂಸಕರನ್ನು ಬಂಧಿಸುವಂತೆ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. “ವಿಗ್ರಹಗಳಿಗೆ ಹಾನಿ ಮಾಡುವ ಕಾರ್ಯ ಮುಂದುವರೆದಿದೆ. ಇದುವರೆಗೆ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ. ಇದರ ಹಿಂದೆ ವಿಗ್ರಹಾರಾಧನೆಯನ್ನು ವಿರೋಧಿಸುವ ಮತ್ತು ತಮ್ಮ ಧರ್ಮಗಳನ್ನು ಹರಡಲು ಬಯಸುವ ದುಷ್ಟಶಕ್ತಿಗಳ ಕೈವಾಡ ಇರಬಹುದು ಎಂದು ಅನುಮಾನ ಮೂಡಿದೆ” ಎಂದು ಸ್ಥಳಿಯರು ಹೇಳುತ್ತಾರೆ.

ರಾಜ್ಯದಲ್ಲಿ ಇತ್ತೀಚೆಗೆ ದೇವಸ್ಥಾನಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಈ ವರ್ಷದ ಜನವರಿ ಮೊದಲ ವಾರದಲ್ಲಿ ನಾಲ್ಕು ವಿಗ್ರಹಗಳನ್ನು ಧ್ವಂಸ ಮಾಡಿಎಉವ ಘಟನೆ ವರದಿಯಾಗಿತ್ತು. ರಾಣಿಪೇಟ್ ಜಿಲ್ಲೆಯ ಕಾವೇರಿಪಾಕ್ಕಂ ಪಕ್ಕದ ಅತ್ತಿಪಟ್ಟು ಗ್ರಾಮದಲ್ಲಿ ಜನವರಿ 2 ರಂದು ನವಗ್ರಹ ಸನ್ನಿಧಿಯ ವಿಗ್ರಹಗಳು ಭಗ್ನಗೊಂಡಿದ್ದವು. ಕೊಯಮತ್ತೂರಿನಲ್ಲಿ ಶ್ರೀಕೃಷ್ಣನ ವಿಗ್ರಹಗಳು ಹಾನಿಗೊಳಗಾಗಿದ್ದವು. ಇದಲ್ಲದೇ ಕಳೆದೊಂದು ವರ್ಷದಲ್ಲಿ ಹಲವಾರು ಹಿಂದೂ ದೇವಾಲಯಗಳ ಮೇಲೆ ಒಂದಲ್ಲ ಒಂದು ರೀತಿಯ ದಾಳಿಗಳಾಗುತ್ತಿವೆ. ಸರ್ಕಾರವೂ ಕೂಡ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ಅನೇಕ ದೇವಸ್ಥಾನಗಳ ಮೇಲೆಕ್ರಮ ಕೈಗೊಂಡಿದೆ.

ಈ ಕುರಿತು ಹಿಂದೂ ಮುನ್ನಾನಿ ರಾಜ್ಯ ಕಾರ್ಯದರ್ಶಿ ಪರಮೇಶ್ವರನ್ ಹೀಗೆನ್ನುತ್ತಾರೆ “ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ತಮಿಳುನಾಡಿನಲ್ಲಿ ಕಳೆದ ಒಂದು ವರ್ಷದಲ್ಲಿ 250ಕ್ಕೂ ಹೆಚ್ಚು ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ ಆದರೆ ಜಲಾನಯನ ಅಥವಾ ಸರಕಾರಿ ಭೂಮಿಯಲ್ಲಿರುವ ಯಾವುದೇ ಅಕ್ರಮ ಚರ್ಚ್, ಮಸೀದಿಗಳಿಗೆ ಏನೂ ಕ್ರಮ ಕೈಗೊಂಡಿಲ್ಲ. ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರವು ಆಡಳಿತವನ್ನು ವಹಿಸಿಕೊಂಡಾಗಿನಿಂದ ಹಿಂದೂ ದೇವಾಲಯಗಳ ಮೇಲೆ ಉದ್ದೇಶಿತ ದಾಳಿಗಳು ನಡೆದಿವೆ. ಈ ಎಲ್ಲಾ ಘಟನೆಗಳಲ್ಲಿ, ಪೊಲೀಸರು ಅವನನ್ನು ಮಾನಸಿಕ ಅಸ್ವಸ್ಥ ಎಂದು ಹೆಸರಿಸಿ ಯಾರನ್ನಾದರೂ ಬಂಧಿಸುತ್ತಾರೆ. ಇಂತಹ ವ್ಯಕ್ತಿಗಳು ಕೇವಲ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ಬೃಹತ್ ಗಾತ್ರದ ವಿಗ್ರಹಗಳನ್ನು ಏಕಾಂಗಿಯಾಗಿ ಹೇಗೆ ಕೆಡವುತ್ತಾರೆ ಎಂಬುದು ತಿಳಿಯುತ್ತಿಲ್ಲ. ಹಿಂದೂ ಫೋಬಿಕ್ ಘಟನೆಗಳು ಹೆಚ್ಚಾಗುತ್ತಿವೆ” ಎಂದು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!