ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಚ್ಚಿ ಏರ್‌ಪೋರ್ಟ್‌ನಲ್ಲಿರುವ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಮಹಿಳಾ ಪ್ರಯಾಣಿಕರೊಬ್ಬರನ್ನು ಬಂಧಿಸಿ ಅಂದಾಜು 1.53 ಕೋಟಿ ರೂ. ಮೌಲ್ಯದ 2,291 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ “ಆಗಸ್ಟ್ 13 ರಂದು, ತಿರುಚ್ಚಿ ವಿಮಾನ ನಿಲ್ದಾಣದ ಎಐಯು ಅಧಿಕಾರಿಗಳು 24-ಕ್ಯಾರಟ್ ಮತ್ತು 22-ಕ್ಯಾರಟ್ ಶುದ್ಧತೆಯ 2,291 ಗ್ರಾಂ ಚಿನ್ನದ ವಸ್ತುಗಳನ್ನು ವಶಪಡಿಸಿಕೊಂಡರು, ಇದರ ಮೌಲ್ಯ ಸುಮಾರು 1.53 ಕೋಟಿ ರೂ. ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಆಗಸ್ಟ್ 12 ರ ತಡರಾತ್ರಿ ಕೌಲಾಲಂಪುರದಿಂದ ಆಗಮಿಸಿದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.