ನೇರ ತೆರಿಗೆ ವಸೂಲಾತಿಯಲ್ಲಿ 24 ಶೇಕಡಾ ಏರಿಕೆ- 14.71 ಲಕ್ಷ ಕೋಟಿ ರೂ. ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2022-23ನೇ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದೆ. ಜನವರಿ 10ರ ವರೆಗಿನ ನೇರ ತೆರಿಗೆ ವಸೂಲಾತಿಯಲ್ಲಿ 24.58 ಶೇಕಡಾದಷ್ಟು ಏರಿಕೆಯಾಗಿದ್ದು ಒಟ್ಟಾರೆ 14.71 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ಸರ್ಕಾರಿ ಅಂಕಿ ಅಂಶಗಳು ಸೂಚಿಸಿವೆ.

ನೇರ ತೆರಿಗೆ ಸಂಗ್ರಹವು 14.71 ಲಕ್ಟಕೋಟಿ ರುಪಾಯಿಗಳಷ್ಟಾಗಿದ್ದು ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 24.58 ಶೇಕಡಾದಷ್ಟು ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಹೇಳಿದೆ. ಮರುಪಾವತಿ ವೆಚ್ಚಗಳನ್ನು ಹೊಂದಿಸಿದ ನಂತರ ನೇರ ತೆರಿಗೆ ಸಂಗ್ರಹದ ನಿವ್ವಳ ಮೊತ್ತವು 2.31 ಲಕ್ಷ ಕೋಟಿ ರೂ.ಗಳಷ್ಟಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ 19.55 ಶೇಕಡಾ ಹೆಚ್ಚಾಗಿದೆ.

ಇದಲ್ಲದೇ 2022 ರ ಏಪ್ರಿಲ್‌ 1 ರಿಂದ 2023ರ ಜನವರಿ 10ರ ನಡುವಿನ ಅವಧಿಯಲ್ಲಿ 2.40 ಲಕ್ಷ ಕೋಟಿ ರೂಪಾಯಿ ಮೊತ್ತದ ಮರುಪಾವತಿಗಳನ್ನು ನೀಡಲಾಗಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ನೀಡಲಾದ ಮರುಪಾವತಿಗಳಿಗಿಂತ 58.74 ಶೇಕಡಾ ಹೆಚ್ಚಾಗಿದೆ.

ಸಂಗ್ರಹವಾದ ಒಟ್ಟೂ ನೇರ ತೆರಿಗೆಯಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ (ಸಿಐಟಿ) ಯಿಂದ ಸಂಗ್ರಹಣೆಗಳು ಶೇಕಡಾ 19.72 ರಷ್ಟು ಏರಿಕೆಯಾಗಿದೆ ಹಾಗು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 30.46 ಶೇಕಡಾ ಏರಿಕೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!