ಪಟಾಕಿ ಸಿಡಿತ ಗಾಯಾಳುಗಳಿಗೆ ಈ ಆಸ್ಪತ್ರೆಗಳಲ್ಲಿ 24×7 ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ರಾಜ್ಯದಲ್ಲೂ ಬೆಳಕಿನ ಹಬ್ಬವನ್ನು ಜನ ಅದ್ದೂರಿಯಾಗಿ ಆಚರಿಸಲಿದ್ದು, ಈ ವೇಳೆ ಪಟಾಕಿ ಸಿಡಿತದಿಂದ ಅವಘಡಗಳು ಉಂಟಾಗುತ್ತವೆ. ಕಣ್ಣು, ದೇಹದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಆಸ್ಪತ್ರೆಗಳು ಸಜ್ಜಾಗಿವೆ.

ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಒಂದು ವಾರದವರೆಗೆ ದಿನದ 24ಗಂಟೆಗಳು ಕಾರ್ಯಾಚರಿಸಲಿವೆ. ತುರ್ತು ವಿಭಾಗ ಸೇರಿದಂತೆ ಎಲ್ಲಾ ಘಟಕಗಳಲ್ಲೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಮಿಂಟೋ ಆಸ್ಪತ್ರೆ ತುರ್ತು ಸಹಾಯವಾಣಿಯನ್ನು ತೆರೆದಿದ್ದು, ಅವಶ್ಯಕತೆಯಿದ್ದವರು ಈ ನಂಬರ್‌ಗಳಿಗೆ  9481740137, 08026707176 ಕರೆ ಮಾಡಬಹುದಾಗಿದೆ.

ಅಷ್ಟೆ ಅಲ್ಲದೆ..ಮಕ್ಕಳು, ಮಹಿಳೆಯರು ಪುರುಷರಿಗಾಗಿ ಪ್ರತ್ಯೇಕ 35ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಔಷಧಿಗಳು ಹಾಗೂ ಕಣ್ಣಿನ ಡ್ರಾಪ್ಸ್‌ ಬೇಕಾದ ಸೌಕರ್ಯಗಳನ್ನು ಸಿದ್ದ ಮಾಡಿಕೊಂಡಿರುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಇನ್ನೂ ದೇಹದ ಯಾವುದೇ ಭಾಗಗಳಿಗೆ ಸುಟ್ಟ ಗಾಯಗಳಾದರೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಕೂಡಾ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಇಲ್ಲಿಯೂ ಕೂಡ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!