ಕಂದಕಕ್ಕೆ ಉರುಳಿ ಬಿದ್ದ ಬಸ್:‌ 25 ಪ್ರಯಾಣಿಕರು ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಿಯಂತ್ರಣ ತಪ್ಪಿದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ, ನಿರ್ವಾಹಕ ಸಹಿತ 25 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಮಧ್ಯ ಫಿಲಿಪ್ಪಿನ್ಸ್​ನ ಆಂಟಿಕ್ ಪ್ರಾಂತ್ಯದಲ್ಲಿ ನಿನ್ನೆ ಭಾರತೀಯ ಕಾಲಮಾನದ ಮಂಗಳವಾರ‌ ಸಂಜೆ ನಡೆದಿದೆ.

ಸುಮಾರು 53 ಪ್ರಯಾಣಿಕರಿದ್ದ ಈ ನತದೃಷ್ಟ ಬಸ್ ಇಲೋಯಿಲೋ ನಗರದಿಂದ ಪಶ್ಚಿಮದ ಆಂಟಿಕ್ ಪ್ರಾಂತ್ಯದಲ್ಲಿರುವ ಸ್ಯಾನ್ ಜೋಸ್ ಡಿ ಬ್ಯೂನಾವಿಸ್ಟಾಗೆ ತೆರಳುತ್ತಿತ್ತು.

ಬಸ್‌ ಮೊದಲು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು ಬಳಿಕ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಗಾಯಗೊಂಡಿರುವ ಕೀನ್ಯಾದ ಓರ್ವ ಪ್ರಯಾಣಿಕ ಸೇರಿದಂತೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲೋಯಿಲೋ ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸ್ಥಳಕ್ಕೆ ತುರ್ತು ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಗಳು‌ ಧಾವಿಸಿ ಬಂದು ಶವಗಳನ್ನು ಹೊರತೆಗೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!