ಅಜರ್‌ಬೈಜಾನ್‌ ಸೈನಿಕರ ದಾಳಿಗೆ 25ನಾಗರೀಕರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರ್ಮೇನಿಯನ್ ನಿಯಂತ್ರಿತ ಕರಾಬಖ್‌ನಲ್ಲಿ ಅಜರ್ಬೈಜಾನಿ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 25ನಾಗರೀಕರು ಸಾವನ್ನಪ್ಪಿರುವುದಾಗಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ತಿಳಿಸಿದ್ದಾರೆ.

ಅಜೆರ್ಬೈಜಾನ್ ಸೈನಿಕರು ಸೋಮವಾರದಿಂದ ಅರ್ಮೇನಿಯಾದಿಂದ ಬೇರ್ಪಟ್ಟ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಅವರ ಮಿಲಿಟರಿ ಆಕ್ರಮಣವು ನಗೊರ್ನೊ-ಕರಾಬಖ್‌ನ ಪ್ರದೇಶದಲ್ಲಿ ಮಂಗಳವಾರ ಇಪ್ಪತ್ತೈದು ಅಮಾಯಕ ಜನರ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸೈನಿಕರ ದಾಳಿಯಲ್ಲಿ  ಮಕ್ಕಳು, ವೃದ್ಧರೆನ್ನದೆ ಸುಮಾರು 138 ಜನರು ಗಾಯಗೊಂಡಿದ್ದಾರೆ. ಈ ಮಿಲಿಟರಿ ಆಕ್ರಮಣವು ನೆರೆಯ ಅರ್ಮೇನಿಯಾದೊಂದಿಗೆ ಹೊಸ ಯುದ್ಧದ ಬೆದರಿಕೆಯನ್ನು ಹೆಚ್ಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!