ದಿನಭವಿಷ್ಯ | ನಿಮ್ಮ ಪ್ರಾಮಾಣಿಕ ಕಾರ್ಯಕ್ಕೆ ಸೂಕ್ತ ಪ್ರತಿಫಲ ದೊರಕುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ನಿಮ್ಮ ಪ್ರಾಮಾಣಿಕ ಕಾರ್ಯಕ್ಕೆ ಸೂಕ್ತ ಪ್ರತಿಫಲ ದೊರಕುವುದು. ಕೌಟುಂಬಿಕ ಪರಿಸರ ಹರ್ಷದಾಯಕ. ಭಿನ್ನಮತ ನಿವಾರಣೆ.

ವೃಷಭ
ವೈಯಕ್ತಿಕ ಸಮಸ್ಯೆ ನಿವಾರಿಸುವಲ್ಲಿ ವ್ಯಸ್ತ ರಾಗುವಿರಿ. ಕೆಲವರ ಅಸಹಕಾರವು ಈ ಕಾರ್ಯ ಕಠಿಣಗೊಳಿ ಸುವುದು. ಆರ್ಥಿಕ ಒತ್ತಡ ಕಾಡುವುದು.

ಮಿಥುನ
ಮಾತುಗಳ ಮೇಲೆ ನಿಯಂತ್ರಣವಿರಲಿ. ಹದತಪ್ಪಿದ ಮಾತು ಸಂಬಂಧ ಕೆಡಿಸಬಹುದು. ಅನವಶ್ಯವಾಗಿ ನಿಷ್ಟುರತೆ ಕಟ್ಟಿಕೊಳ್ಳದಿರಿ.

ಕಟಕ
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಪ್ರಮುಖ ವಸ್ತು ಖರೀದಿಯ ಉತ್ಸಾಹವನ್ನು ತುಸು ಕಾಲ ತಡೆಹಿಡಿಯಿರಿ. ಕಾಲ ಪಕ್ವವಾಗಿಲ್ಲ.

ಸಿಂಹ
ನಿಮ್ಮ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಆದ್ಯತೆ ಕೊಡಿ. ಇಲ್ಲವಾದರೆ ಸಮಸ್ಯೆ ಎದುರಿಸುವಿರಿ. ಉದ್ಯಮದಲ್ಲಿ ತುಸು ಹಿನ್ನಡೆ ಉಂಟಾದೀತು. ಆರ್ಥಿಕ ಒತ್ತಡ.

ಕನ್ಯಾ
ಹೆತ್ತವರು ಮಕ್ಕಳ ಆರೋಗ್ಯದ ಬಗ್ಗೆ ತುಸು ಗಮನ ಹರಿಸಬೇಕು. ಆಹಾರ ಸೇವನೆ ಹಿತಮಿತವಾಗಿರಲಿ. ಅಜೀರ್ಣದಂತಹ ಸಮಸ್ಯೆ ಕಾಡೀತು.

ತುಲಾ
ಮುಖ್ಯ ಕಾರ್ಯವನ್ನು ಏಕಾಂಗಿಯಾಗಿ ಮಾಡಲು ಹೋಗದಿರಿ. ತಂಡಪ್ರಯತ್ನದಿಂದ ಸುಲಭಸಾಧ್ಯ. ಖರೀದಿ ಉತ್ಸಾಹದಲ್ಲಿ ಹಣ ಹೆಚ್ಚು ಖರ್ಚಾದೀತು.

ವೃಶ್ಚಿಕ
ಆಪ್ತರ ಜತೆಗೆ ಸೌಹಾರ್ದದಿಂದ ನಡಕೊಳ್ಳಿ. ವಾಗ್ವಾದವನ್ನು ತಪ್ಪಿಸಿ. ಸಣ್ಣ ವಿಷಯಗಳು ಸಂಬಂಧ ಕೆಡಿಸದಂತೆ ಎಚ್ಚರ ವಹಿಸಿರಿ.

ಧನು
ಸಣ್ಣ ಕೆಲಸವೂ ಪ್ರಯಾಸಕರ ಎಂದೆನಿಸೀತು. ಕೆಲಸ ಪೂರೈಸಲು ಹೆಚ್ಚು ಶ್ರಮ ಬೇಕಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಮಕರ
ವೃತ್ತಿಯ ಎಲ್ಲಾ ಕೆಲಸಗಳನ್ನು ಬಿಟ್ಟು ಕುಟುಂಬದ ಜತೆ ಕಾಲ ಕಳೆಯಿರಿ. ಅವರ ಬೇಕು
ಬೇಡಗಳನ್ನು ಅಲಕ್ಷಿಸದಿರಿ. ಕೌಟುಂಬಿಕ ಶಾಂತಿ, ಹಿತ ಮುಖ್ಯ.

ಕುಂಭ
ಅತಿಹೆಚ್ಚು ಕ್ರಿಯಾಶೀಲ ದಿನ. ಒಂದಿಲ್ಲೊಂದು ಕಾರ್ಯ ಬೆನ್ನು ಹತ್ತುತ್ತಲೇ ಇರುತ್ತದೆ. ವಿರಾಮಕ್ಕೆ ಅವಕಾಶ ಸಿಗದು. ಕೌಟುಂಬಿಕ ಸಹಕಾರ ಲಭ್ಯ.

ಮೀನ
ಕೌಟುಂಬಿಕ ಸಂಬಂಧವು ಸೌಹಾರ್ದಯುತ. ಭಿನ್ನಾಭಿಪ್ರಾಯ ಸಮಾಧಾನದಿಂದ ಪರಿಹಾರ. ಆರ್ಥಿಕ ವ್ಯವಹಾರ ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!