ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎದುರು ಕನಿಷ್ಠ 26 ಮಂದಿ ನಕ್ಸಲರು ಇಂದು ಶರಣಾಗಿದ್ದಾರೆ.
ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ‘ಜನ ಮಿಲಿಶಿಯಾ’ ಕಮಾಂಡರ್ ರಾಜೇಶ್ ಕಶ್ಯಪ್, ‘ಜನತಾನಾ ಸರ್ಕಾರ್’ ಮುಖ್ಯಸ್ಥ ಕೋಸ ಮದ್ವಿ ಹಾಗೂ ಸಿಎನ್‌ಎಂ ಸಂಘಟನೆಯ ಛೋಟು ಕುಂಜಾಂ ಶರಣಾದವರಲ್ಲಿ ಪ್ರಮುಖರು.
‘ಪೊಳ್ಳು’ ಹಾಗೂ ‘ಅಮಾನವೀಯ’ ನಕ್ಸಲ್ ಸಿದ್ಧಾಂತದಿಂದ ಬೇಸತ್ತು ಹಾಗೂ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಉಲ್ಬಣಗೊಂಡಿದ್ದರಿಂದ ಶರಣಾಗತಿ ನಿರ್ಧಾರ ಕೈಗೊಂಡಿದ್ದಾಗಿ ನಕ್ಸಲರು ತಿಳಿಸಿದ್ದಾರೆ.