ಬಂದೂಕುಧಾರಿಗಳ ದಾಳಿಗೆ 26ನೈಜೀರಿಯಾ ಸೈನಿಕರು ಬಲಿ, ಹೆಲಿಕಾಪ್ಟರ್ ಪತನ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಂದೂಕುಧಾರಿಗಳ ದಾಳಿಯಲ್ಲಿ 26 ಮಂದಿ ನೈಜೀರಿಯನ್‌ ಸೈನಿಕರು ಹುತಾತ್ಮರಾಗಿದ್ದಾರೆ. ಕ್ರಿಮಿನಲ್ ಗುಂಪಿನಿಂದ ತಡರಾತ್ರಿ ನಡೆದ ಹೊಂಚುದಾಳಿಯಲ್ಲಿ 26 ಸೈನಿಕರು ಬಲಿಯಾಗಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಗಾಯಾಳುಗಳ ರಕ್ಷಣೆಗೆ ಬಂದ ಹೆಲಿಕಾಪ್ಟರ್ ಪತನಗೊಂಡಿದೆ. ಕ್ರಿಮಿನಲ್ ಗುಂಪಿನ ಗುಂಡಿನ ದಾಳಿಯಿಂದಾಗಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ನೈಜೀರಿಯಾದ ಮಿಲಿಟರಿ ಮೂಲಗಳು ಬಹಿರಂಗಪಡಿಸಿವೆ.

ನೈಜೀರಿಯನ್ ಸೈನ್ಯ ಹಾಗೂ ಅಲ್ಲಿನ ಕೆಲವು ಕ್ರಿಮಿನಲ್ ಗುಂಪುಗಳ ನಡುವೆ ದಾಳಿ ಮುಂದುವರೆಯುತ್ತಲೇ ಇದೆ. ಬಂದೂಕುಧಾರಿಗಳ ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಸ್ಥಳಾಂತರಿಸಲು ಬಂದಿದ್ದ ಎಂಐ-171 ಹೆಲಿಕಾಪ್ಟರ್ ಜುಂಗೇರುವಿನಿಂದ ಟೇಕಾಫ್ ಆದ ಬಳಿಕ ಪತನಗೊಂಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾದ ನೈಜರ್, ಕಡುನಾ, ಝಂಫರಾ ಮತ್ತು ಕಟ್ಸಿನಾ ರಾಜ್ಯಗಳಲ್ಲಿ ಕ್ರಿಮಿನಲ್ ಗ್ಯಾಂಗ್‌ಗಳು ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಮತ್ತು ಅಪಹರಣಗಳನ್ನು ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!