Monday, October 2, 2023

Latest Posts

600‌ ಅಡಿ ಎತ್ತರದ ಬೆಟ್ಟದ ಮೇಲೆ 60‌ ಅಡಿ ತ್ರಿವರ್ಣ ಧ್ವಜ ಹಾರಿಸಿದ ಯುವಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ದಿನವನ್ನು ಯುವಕರ ಗುಂಪೊಂದು ವಿಶೇಷವಾಗಿ ಆಚರಿಸುವ ಮೂಲಕ ದೇಶಭಕ್ತಿ ಸಾರಿದ್ದಾರೆ.

ಯುವಕರ ಗುಂಪೊಂದು 600 ಅಡಿ ಎತ್ತರದ ಬೆಟ್ಟದ ಮೇಲೆ 60 ಅಡಿ ತ್ರಿವರ್ಣಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಇಂದು ಮುಂಜಾನೆ ಬೆಟ್ಟವನ್ನು ಏರಿದ ಸಚಿನ್ ಹಾಗೂ ಅವರ ತಂಡ 60 ಅಡಿ ಉದ್ದದ ತ್ರಿವರ್ಣಧ್ವಜವನ್ನು 600 ಅಡಿ ಎತ್ತರದ ಬೆಟ್ಟದ ಮೇಲೆ ನಿಂತು ಹಾರಿಸಿದ್ದಾರೆ.

ಈ ಯುವಕರ ಗುಂಪು ಪ್ರತಿವರ್ಷವೂ ಈ ಬೆಟ್ಟದ ಮೇಲೆ ಧಜಾರೋಹಣ ನೆರವೇರಿಸುತ್ತದೆ. ಪ್ರತಿ ವರ್ಷವೂ ಇವರು ಹಾರಿಸುವ ಬಾವುಟವನ್ನು 5 ಅಡಿ ಎತ್ತರ ಹೆಚ್ಚಿಸಿಕೊಂಡು ಹೋಗುತ್ತಾರೆ. ಅದರಂತೆಯೇ ಈ ವರ್ಷ 60 ಅಡಿ ಎತ್ತರ ಇರುವ ಧ್ವಜವನ್ನು ಹಾರಿಸಿದ್ದಾರೆ. ಬಳಿಕ ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!