ಇಸ್ರೇಲಿ ಸಂಗೀತೋತ್ಸವ ಕಾರ್ಯಕ್ರಮದ ವೇಳೆ ಹಮಾಸ್ ಉಗ್ರರ ದಾಳಿ: 260 ಮೃತದೇಹಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲಿ ಸಂಗೀತೋತ್ಸವದ ಮೇಲೆ ಹಮಾಸ್ ಉಗ್ರರು ನಡೆಸಿದ ಗುಂಡಿನ ದಾಳಿಗೆ ಕಾರ್ಯಕ್ರಮ ಸಂಪೂರ್ಣವಾಗಿ ರಣರಂಗವಾಗಿ ಮಾರ್ಪಟ್ಟಿತು. ಗಾಜಾ ಬಳಿಯ ಕಿಬ್ಬುಟ್ಜ್ ರೀಮ್ ಬಳಿ ನೇಚರ್ ಪಾರ್ಟಿಯ ಮೇಲೆ ದಾಳಿ ಬಳಿಕ ಮೃತದೇಹಗಳ ರಾಶಿ ಕಂಡುಬಂತು. ಸಂಗೀತ ಉತ್ಸವದ ಸ್ಥಳದಲ್ಲಿ 260 ಶವಗಳು ಪತ್ತೆಯಾಗಿದ್ದು, ರಾಕೆಟ್ ದಾಳಿಯಿಂದಾಗಿ ಸ್ಥಳದ ಸುತ್ತಲೂ ಬೆಂಕಿ ಆವರಿಸಿದೆ. ಗಾಬರಿಗೊಂಡ ಜನ ದಿಕ್ಕಾಪಾಲಾಗಿ ಓಡಿದ ದೃಶ್ಯ ಕಂಡುಬಂತು.

ತಪ್ಪಿಸಿಕೊಳ್ಳಲು ಯತ್ನಿಸಿದ ಜನರ ಮೇಲೆ ಹಮಾಸ್ ಬಂದೂಕುಧಾರಿಗಳು ಗುಂಡಿನ ಮಳೆಗರೆದರು. ಈ ದಾಳಿಯಲ್ಲಿ ಸುಮಾರು 260ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಈ ದಾಳಿಯಿಂದ ಪಾರಾಗಲು ಓಡಿ ಹೋಗುತ್ತಿದ್ದ ಇಸ್ರೇಲಿಗರನ್ನು ಬೆನ್ನಟ್ಟಿದ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಉಗ್ರರ ದಾಳಿಯಿಂದ ಪಲಾಯನ ಮಾಡುವ ಸಂದರ್ಭದಲ್ಲಿ ಹಲವರು ಕಾರುಗಳಲ್ಲಿಯೇ ರಾಕೆಟ್ ದಾಳಿಯಿಂದ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!