ದಿನಭವಿಷ್ಯ | ಕಾರ್ಯವೊಂದು ಸಕಾಲದಲ್ಲಿ ಮುಗಿದ ಸಂತೃಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ದೊಡ್ಡ ಸಮಸ್ಯೆ ಯೊಂದು ಸುಲಭದಲ್ಲಿ ಪರಿಹಾರ. ಅದರಿಂದ ಮನಸ್ಸಿಗೆ ನಿರಾಳತೆ. ಪ್ರೀತಿಸಿದ ವ್ಯಕ್ತಿಯಿಂದ ಸಕಾರಾತ್ಮಕ ಸ್ಪಂದನೆ, ಸಂತೋಷ ವೃದ್ಧಿ.

ವೃಷಭ
ಕಾರ್ಯವೊಂದು ಸಕಾಲದಲ್ಲಿ ಮುಗಿದು ತೃಪ್ತಿ. ಇತರರಿಂದ ಸಹಕಾರವೂ ದೊರಕುವುದು. ಆರ್ಥಿಕ ಬಿಕ್ಕಟ್ಟು ನಿವಾರಣೆ, ಧನಪ್ರಾಪ್ತಿ.

ಮಿಥುನ
ಕೆಲಸದ ಒತ್ತಡವಿಲ್ಲದ ನಿರಾಳ ದಿನ. ಸಮಸ್ಯೆ ಗಳು ಕಾಡುವುದಿಲ್ಲ. ಕೌಟುಂಬಿಕ ಪರಿಸ್ಥಿತಿಯೂ ನಿಮಗೆ ಪೂರಕ. ಒಟ್ಟಿನಲ್ಲಿ  ನೆಮ್ಮದಿಯ ದಿನವಿದು.

ಕಟಕ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಸವಾಲು ಎದುರಿಸುವಿರಿ. ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಂತೆ ವರ್ತಿಸದಿರಿ. ಆರ್ಥಿಕ ಒತ್ತಡ ಆಧಿಕ.

ಸಿಂಹ
ಕಠಿಣವೆನಿಸಿದರೂ ಮುಖ್ಯ ಕಾರ್ಯವನ್ನು ಮಾಡಿ ಮುಗಿಸುವಿರಿ. ಸವಾಲು ನಿಮ್ಮನ್ನು ಎದೆಗುಂದಿಸದು. ಪ್ರೀತಿಪಾತ್ರ ಪ್ರೋತ್ಸಾಹ, ಶ್ಲಾಘನೆ.

ಕನ್ಯಾ
ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸಬೇಕು. ಅದಕ್ಕೆ ಹಿಂಜರಿಕೆ ತೋರದಿರಿ. ಅದರ ಸಮರ್ಥ ನಿರ್ವಹಣೆ ನಿಮಗೆ ಲಾಭವನ್ನೆ ತರಲಿದೆ.

ತುಲಾ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಸೂಕ್ತ ಪ್ರತಿಫಲ ದೊರಕಲಾರದು. ಹಣಕಾಸು ಮುಗ್ಗಟ್ಟು ಎದುರಿಸುವಿರಿ. ಕೌಟುಂಬಿಕ ಅಸಹಕಾರ.

ವೃಶ್ಚಿಕ
ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಅದನ್ನು ಜಾಣ್ಮೆಯಿಂದ ನಿಭಾಯಿಸಿ. ದುಡುಕಿನ ಪ್ರತಿಕ್ರಿಯೆ ಮತ್ತಷ್ಟು ತೊಂದರೆ ತಂದೀತು. ಸಹನೆ ಪ್ರದರ್ಶಿಸಿ.

ಧನು
ನಿಮಗೆ ಪೂರಕವಾದ ಬೆಳವಣಿಗೆ.  ಸ್ನೇಹಿತ ರಿಂದ ಧನಪ್ರಾಪ್ತಿ. ಮನೆಯಲ್ಲಿನ ಕಾರ್ಯವೊಂದು ಸುಗಮವಾಗಿ ಪೂರ್ಣಗೊಳ್ಳುವುದು.

ಮಕರ
ಸಂತೋಷ ಮತ್ತು ಉಲ್ಲಾಸದ ದಿನ. ಕೌಟುಂಬಿಕವಾಗಿ ಶಾಂತಿ, ಸಹಕಾರ. ಉದ್ದೇಶದಲ್ಲಿ ಸಫಲತೆ. ಬಂಧುಗಳಿಂದ ಶುಭ ಸುದ್ದಿ ಕೇಳಿಬಂದೀತು.

ಕುಂಭ
ನಿಮಗೆ ಪೂರಕ ದಿನ. ಆದರೆ ಇತರರ ಜತೆ ವಾಗ್ವಾದಕ್ಕೆ ಹೋಗದಿರಿ. ಅದರಿಂದ ನಿಮ್ಮ ನೆಮ್ಮದಿಯೇ ಹಾಳು. ಆರ್ಥಿಕ ಪರಿಸ್ಥಿತಿ ಸುಧಾರಣೆ.

ಮೀನ
ಕೆಲಸಕ್ಕೆ ತಕ್ಕ ಫಲವಿಲ್ಲ. ನಿರಾಶೆಗೆ ತಳ್ಳುವ ಪ್ರಸಂಗ ಉಂಟಾ ದೀತು. ನಿಮ್ಮ ಕುರಿ ತಂತೆ ಕೆಲವರಿಂದ ಅಪಪ್ರಚಾರ ನಡೆಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!