ಇಸ್ರೇಲ್ ನಲ್ಲಿ ಸಿಲುಕಿಕೊಂಡ ಮೇಘಾಲಯದ 27 ನಾಗರಿಕರು: ವಿದೇಶಾಂಗದ ಸಹಾಯ ಕೋರಿದ ಸಿಎಂ ಸಂಗ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧದ ಸಂಘರ್ಷ ನಿರ್ಮಾಣವಾಗಿದ್ದು, ಈ ನಡುವೆ ಇಸ್ರೇಲ್ ನಲ್ಲಿ ಮೇಘಾಲಯದ 27 ಜನ ಸಿಲುಕಿದ್ದು, ಅವರನ್ನು ರಕ್ಷಿಸಲು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯ ಕೋರಿದ್ದಾರೆ.

ಮೇಘಾಲಯದ ಜನರನ್ನು ಮರಳಿ ರಾಜ್ಯಕ್ಕೆ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಸಂಗ್ಮಾ ಅವರು ತಿಳಿಸಿದ್ದಾರೆ.

ಪವಿತ್ರ ತೀರ್ಥಯಾತ್ರೆಗಾಗಿ ಇಸ್ರೇಲ್ ರಾಜಧಾನಿ ಜೆರುಸಲೆಂಗೆ ಪ್ರಯಾಣಿಸಿದ ಮೇಘಾಲಯದ 27 ನಾಗರಿಕರು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಪ್ರಸ್ತುತ ಉದ್ವಿಗ್ನತೆಯಿಂದಾಗಿ ಬೆಥ್ ಲೆಹೆಮ್ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸಂಗ್ಮಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅವರು ಸುರಕ್ಷಿತವಾಗಿ ಮನೆಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾನು MEA ಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮೇಘಾಲಯ ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here